ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದರಿದಾಗಿ ಸೊಳೆಗಳ ಕಾಟ ಸಹ ಹೆಚಗ್ಚಾಗಿದ್ದು ದಿನೇ ದಿನೇ ಡೆಂಗ್ಯೂ (Dengue) ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಸಿಲಿಕಾನ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವರುಣನ ಅರ್ಭಟ ಜೋರಾಗಿದೆ. ಈ ಹಿನ್ನೆಲೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತಿವೆ. ಡೆಂಗ್ಯೂವನ್ನು ತಡೆಗಟ್ಟಲೂ ಸರ್ಕಾರ ನಾನಾ ಕಸರತ್ತುಗಳನ್ನ ಮಾಡುತ್ತಿದೆ. ವರೆಗೂ ರಾಜ್ಯದಲ್ಲಿ ಡೆಂಘೀ ಪಾಸಿಟಿವ್ ಬಂದ 10ಕ್ಕೂ ಹೆಚ್ಚು ಜನರ ಸಾವಾಗಿದ್ದು, ವೈಫಲ್ಯ ಮುಚ್ಚಲು ಸಾವಿನ ಸಂಖ್ಯೆಯನ್ನ ಆರೋಗ್ಯ ಇಲಾಖೆ ಮುಚ್ಚಿಡ್ತಾ ಇದೆಯಾ? ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ರಣಕೇಕೆ- 24 ಗಂಟೆಯಲ್ಲಿ 159 ಮಂದಿಯಲ್ಲಿ ಸೊಂಕು ಪತ್ತೆ
ಡೆಂಘಿ ಸಸ್ಪೆಕ್ಟೆಡ್ ಕೇಸ್‌ಗಳ ಸಾವಾಗಿ ಮೂರ್ನಾಲ್ಕು ದಿನಗಳು ಕಳೆದರೂ ರಿಪೋರ್ಟ್‌ಗಳು ಮಾತ್ರ ಬರುತ್ತಿಲ್ಲ. ರಿಪೋರ್ಟ್ ವಿಳಂಬ ಮಾಡಿ ತಮ್ಮ ವೈಫಲ್ಯ ಮುಚ್ಚಲು ಮುಂದಾಯ್ತಾ ಆರೋಗ್ಯ ಇಲಾಖೆ…? ಎನ್ನುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ. ವರೆಗೂ ಕೇವಲ 6 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ತೋರಿಸುತ್ತಿವೆ.
ಡೆಂಘೀ ಪಾಸಿಟಿವ್ ಇದ್ದವರು ಸಾವನ್ನಪ್ಪಿದ್ರೂ ಅಂಕಿಅಂಶಗಳಲ್ಲಿ ಯಾಕೆ ಸೇರಿಸ್ತಿಲ್ಲಾ? ಡೆಂಗ್ಯೂ ರಿಪೋರ್ಟ್ ಹಲವು ಅನುಮಾನಕ್ಕೆ ಕಾರಣವಾಗ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರ ಭೀಕರ ಹತ್ಯೆ