ಬೆಂಗಳೂರು, ಏಪ್ರಿಲ್ 19, 2026: Vinay Kulakarni ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟ ಹಿನ್ನೆಲೆ, ಬೆಂಗಳೂರಿನ Parappana Agrahara Central Prison ನಲ್ಲಿ ಜೈಲು ಅಧಿಕಾರಿಗಳು ಅಧಿಕೃತವಾಗಿ ಸಜಾ ಬಂಧಿ ಖೈದಿ ಸಂಖ್ಯೆಯನ್ನು ನೀಡಿದ್ದಾರೆ.
Yogish Gowda ಕೊಲೆ ಪ್ರಕರಣದಲ್ಲಿ ದೋಷಿಗಳಾಗಿ ತೀರ್ಪುಗೊಂಡಿರುವ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಅಪರಾಧಿಗಳಿಗೆ ಶನಿವಾರ ಬೆಳಿಗ್ಗೆ ಕಾನೂನು ಪ್ರಕ್ರಿಯೆಗಳ ನಂತರ ಖೈದಿ ಸಂಖ್ಯೆಗಳು ಹಂಚಿಕೆ ಮಾಡಲಾಗಿದೆ. ವಿನಯ್ ಕುಲಕರ್ಣಿಗೆ ಸಜಾ ಬಂಧಿ ಸಂಖ್ಯೆ 16110 ನೀಡಲಾಗಿದೆ.
ಶುಕ್ರವಾರ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರಲಾದ ಈ ಆರೋಪಿಗಳಿಗೆ ಆರಂಭದಲ್ಲಿ ವಿಚಾರಣಾಧೀನ ಖೈದಿಗಳ (UTP) ಸಂಖ್ಯೆಯನ್ನು ನೀಡಲಾಗಿತ್ತು. ನಂತರ ಶನಿವಾರ ಅಧಿಕೃತವಾಗಿ ಶಿಕ್ಷೆಗೊಳಗಾದ ಬಂಧಿಗಳಾಗಿ ಪರಿವರ್ತನೆ ಮಾಡಿ ನೂತನ ಸಂಖ್ಯೆಯನ್ನು ನೀಡಲಾಗಿದೆ.
ಜೈಲು ಮೂಲಗಳ ಪ್ರಕಾರ, ವಿನಯ್ ಕುಲಕರ್ಣಿ ಅವರನ್ನು ಡಿ ಬ್ಯಾರಕ್‌ನ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಅವರ ಜೊತೆಗೆ ಇನ್ನೂ ಮೂವರು ಅಪರಾಧಿಗಳನ್ನು ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದ್ದು, ಉಳಿದವರನ್ನು ಪಕ್ಕದ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ.
ಜೈಲಿಗೆ ಸೇರಿದ್ದ ಮೊದಲ ರಾತ್ರಿ ವಿನಯ್ ಕುಲಕರ್ಣಿ ಮಾನಸಿಕ ಒತ್ತಡದಲ್ಲಿ ಇದ್ದರು ಎನ್ನಲಾಗಿದ್ದು, ಸರಿಯಾಗಿ ಆಹಾರ ಸೇವಿಸದೇ ತಡರಾತ್ರಿ ವರೆಗೆ ಚಿಂತೆಯಲ್ಲಿ ಕಳೆದಿದ್ದಾರೆ. ಶನಿವಾರ ಬೆಳಿಗ್ಗೆಯಿಂದ ಸಾಮಾನ್ಯ ಸ್ಥಿತಿಗೆ ಮರಳಿ, ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದ್ದಾರೆ. ನಂತರ ರಾತ್ರಿ ಸಾಮಾನ್ಯ ಖೈದಿಗಳಂತೆ ಜೈಲೂಟವನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಜಾ ಬಂಧಿ ಖೈದಿ ಸಂಖ್ಯೆಗಳ ಪಟ್ಟಿ:
ವಿಕ್ರಂ ಬಳ್ಳಾರಿ – 16097
ಕೀರ್ತಿ ಕುಮಾರ್ ಬೆಳ್ಳಟ್ಟಿ – 16098
ಸಂದೀಪ್ ಸವದತ್ತಿ – 16099
ವಿನಾಯಕ ಕಟಗಿ – 16100
ಮಹಾಬಲೇಶ್ವರ ಹೊಂಗಳೇ – 16101
ಸಂತೋಷ ಸವದತ್ತಿ – 16102
ದಿನೇಶ್ – 16103
ಅಶ್ವಥ್ – 16104
ಸುನಿಲ್ – 16105
ನಜೀರ್ ಅಹ್ಮದ್ – 16106
ಶನವಾಜ್ – 16107
ನೂತನ್ – 16108
ಹರ್ಷೀತ್ – 16109
ವಿನಯ್ ಕುಲಕರ್ಣಿ – 16110
ಚಂದ್ರಶೇಖರ್ ಇಂಡಿ – 16111
ವಿಕಾಸ್ ಕಲಬುರ್ಗಿ – 16112
ಚನ್ನಕೇಶವ ಟಿಂಗರಿಕರ್ – 16113

