ಬೆಂಗಳೂರು: ತೋಟಗಾರಿಕೆ ಇಲಾಖೆಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ. 8 ರಿಂದ 19 ರವರೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ 216ನೇ ಫಲಪುಷ್ಪ ಪ್ರದರ್ಶನವನ್ನು ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿಆಯೋಜಿಸಿದೆ.
ಈ ಬಾರಿಯ ಆಗಸ್ಟ್ 15 ಸ್ವತಂತ್ರ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಮತ್ತೆ ಫ್ಲವರ್ ಶೋ ಇರಲಿದೆ. ಈ ಸಲ ಅಂಬೆಡ್ಕರ್ ಥೀಮ್ ನಲ್ಲಿ ಫ್ಲವರ್ ಶೋ ಆಯೋಜಿಸುತ್ತಿದ್ದು, ಫ್ಲವರ್ ಶೋ ನಲ್ಲಿ ಈ ಭಾರಿ ವಿದೇಶಿ ಹೂಗಳು ರಾರಾಜಿಸಲಿವೆ.
ಆಗಸ್ಟ್ 8 ರಂದು ಸಿಎಂ ಸಿದ್ದಾರಾಮಾಯ್ಯ ಅವರು ಅದ್ದೂರಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ಈ ಬಾರಿಯ ಫ್ಲವರ್ ಶೋ ವಿದೇಶಿ ಹಾಗೂ ಸ್ವದೇಶಿ ಹೂಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ದು, ಒಟ್ಟು 34 ಲಕ್ಷಗಳ ಹೂಗಳಿಂದ ಫ್ಲವರ್ ಶೋ ಕಂಗೊಳಿಸಲಿದೆ. ಇನ್ನು ಈ ಫ್ಲವರ್ ಶೋ ಆಗಸ್ಟ್ 19 ರವರೆಗೆ ಇರಲಿದೆ.
ಫ್ಲವರ್ ಶೋನಲ್ಲಿ ಬಗೆ ಬಗೆಯ ಒಟ್ಟು 35 ಲಕ್ಷಹೂಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ಬಾರಿ 9 ರಿಂದ 10 ಲಕ್ಷ ಜನರು ಫ್ಲವರ್ ಶೋ ಬಂದಿದ್ರು. ಈ ವರ್ಷ ಇದಕ್ಕಿಂತ ಹೆಚ್ಚು ಜನರುಬರುವ ಸಾಧ್ಯಾತೆ ಇದ್ದು, ಫ್ಲವರ್ ಶೋಗೆ ಬರುವವರಿಗರ 4 ಗೇಟ್ ಗಳಲ್ಲಿ ಎಂಟ್ರಿ ಕೊಡಲಾಗಿದೆ. ಇನ್ನು ಭದ್ರತಾ ದೃಷ್ಟಿಯಿಂದ 200 ಜನ ವಾಲಿಂಟರಿಯರ್ಸ್ ಸ್ವಚ್ಚತೆಯಲ್ಲಿ ಇರಲಿದ್ದು, ಯಾವುದೇ ಅಚಾತುರ್ಯ ಘಟನೆಗಳು ಸಂಭಂವಿಸಿದಂತೆ 6 ಆ್ಯಂಬುಲೆನ್ಸ್ ಆಯೋಜಿಸಲಾಗಿದೆ ಮಾಡಲಾಗಿದ್ದು, 6 ಕಡೆ ಆರೋಗ್ಯ ಶಿಬಿರ ಹಾಕಲಾಗಿದೆ. ಇನ್ನು ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಸ್ವಚ್ಚತೆಗೆ ಹೆಚ್ಚಿನ ಆಧ್ಯಾತೆ ನೀಡಿದ್ದು, ಡೆಂಗ್ಯೂ ಹೆಚ್ಚಾಗದಂತೆ ನೀರು ಇರುವ ಕಡೆ ಸ್ವಚ್ಚ ಮಾಡಲಾಗಿದೆ.
ಟಿಕೆಟ್ ಎಷ್ಟು..?
-ಪ್ರದರ್ಶನಕ್ಕೆ ಬರುವವರ ಅನುಕೂಲಕ್ಕೆ ಆನ್ಲೈನ್ ಟಿಕೆಟ್ ವ್ಯವಸ್ಥೆ
-ವಯಸ್ಕರಿಗೆ 100 ರೂಪಾಯಿ ಟಿಕೆಟ್ ಫಿಕ್ಸ್ ಮಾಡಿದ್ದು ಶಾಲಾ ಮಕ್ಕಳಿಗೆ ಉಚಿತ
-ಉಳಿದಂತೆ ಮಕ್ಕಳಿಗೆ 30 ರೂಪಾಯಿ ಎಂಟ್ರೆನ್ಸ್ ಫೀಸ್
-ತುರ್ತು ಚಿಕಿತ್ಸೆಗಾಗಿ 6 ಆಂಬ್ಯುಲೆನ್ಸ್ ಮೀಸಲು
-ಕುಡಿಯುವ ನೀರಿಗೆ 18 ಕಡೆ ವ್ಯವಸ್ಥೆ
-ಡೆಂಘೀ ಹಿನ್ನಲೆ ಸ್ವಚ್ಛತೆಗೆ ಈ ಬಾರಿ ಆದ್ಯತೆ ಜಾಸ್ತಿ, ಪ್ಲಾಸ್ಟಿಕ್ ಬಳಕೆ ನಿಷೇಧ
-ಭದ್ರತೆಯ ದೃಷ್ಟಿಯಿಂದ 139 ಸಿಸಿಟಿವಿ ಕ್ಯಾಮೆರಾ ಅಳವಡಿಕೆ
-400 ಪೊಲೀಸರು, ಬಿಬಿಎಂಪಿ ಮಾರ್ಷಲ್ ಹಾಗೂ ಸಿಬ್ಬಂದಿ ನಿಯೋಜನೆ