ಸ್ಟಾ ಕ್ಹೋಮ್: ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಮೂರು ಜನ ಅರ್ಥಶಾಸ್ತ್ರಜ್ಞರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಈ ಬಾರಿ (2024ನೇ) ಸಾಲಿನಲ್ಲಿ ಡೇರಾನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಹಾಗೂ ಜೇಮ್ಸ್ ಎ. ರಾಬಿನ್ಸನ್ ಅವರಿಗೆ ನೀಡಲಾಗಿದೆ.
ಅರ್ಥಶಾಸ್ತ್ರದಲ್ಲಿ ಮೂರು ಜನ ತಜ್ಞರಿಗೆ ಈ ಪ್ರಶಸ್ತಿ ನೀಡುವ ವಿಚಾರವನ್ನು ಸೋಮವಾರ ದಿ. ದಿ ನೊಬೆಲ್ ಪ್ರಶಸ್ತಿ ಸೋಷಿಯಲ್ ಮೀಡಿಯಾ ಅಧಿಕೃತ ಖಾತೆಯಲ್ಲಿ ಪ್ರಕಟಿಸಲಾಗಿದೆ.
ರಾಯಲ್ ಸ್ವೀ ಡಿಶ್ ಅಕಾಡೆಮಿ ಆಫ್ ಸೈನ್ಸ ಸ್ ಆರ್ಥಿಕ ಕ್ಷೇ ತ್ರ ದಲ್ಲಿನಕೊಡುಗೆಗಾಗಿ 2024ರನೊಬೆಲ್
ಪ್ರ ಶಸ್ತಿಯನ್ನು ಘೋಷಿಸಿದೆ. ಆರ್ಥಿಕ ವಿಜ್ಞಾ ನ ಕ್ಷೇ ತ್ರ ದಲ್ಲಿ ಆಲ್ಫ್ರೆಡ್ನೊಬೆಲ್ ಅವರ ಸ್ಮ ರಣೆಗಾಗಿ ಸ್ವೆ ರಿಜಸ್
ರಿಕ್ಸ್ಬ್ಯಾಂ ಕ್ ಪ್ರ ಶಸ್ತಿಯನ್ನು ಡೇರಾನ್ ಅಸೆಮೊಗ್ಲು , ಸೈಮನ್ ಜಾನ್ಸ ನ್ ಮತ್ತು ಜೇಮ್ಸ್ ಎ. ರಾಬಿನ್ಸ ನ್ ಅವರಿಗೆ
ನೀಡಲಾಗಿದೆ.
ಸಂಸ್ಥೆ ಗಳು ಹೇಗೆರೂಪುಗೊಳ್ಳು ತ್ತವೆ ಮತ್ತು ಅವು ಸಮೃದ್ಧಿಯಮೇಲೆ ಹೇಗೆ ಪರಿಣಾಮ
ಬೀರುತ್ತವೆ ಎಂಬ ಅಧ್ಯ ಯನಕ್ಕಾ ಗಿ ವಿಜೇತರಿಗೆ ಗೌರವವನ್ನು ನೀಡಲಾಯಿತು ಎಂದು ರಾಯಲ್ ಸ್ವೀ ಡಿಶ್
ಅಕಾಡೆಮಿ ಆಫ್ ಸೈನ್ಸ ಸ್ ತಿಳಿಸಿದೆ.
ಸಾಹಿತ್ಯ ಹಾಗೂ ಅರ್ಥಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇನ್ನು 2024ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 7ರಿಂದ ಪ್ರಕಟಿಸಲಾಗುತ್ತಿದೆ. ಇನ್ನು ಈಗಾಗಲೇ ರಾಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಇದೀಗ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಆರ್ಥಿಕ ವಿಜ್ಞಾನ ಕ್ಷೇತ್ರದ ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥವಾಗಿ ಸ್ವೆರಿಜಸ್ ರಿಕ್ಸ್ ಬ್ಯಾಂಕ್ (ನೊಬೆಲ್) ಪ್ರಶಸ್ತಿಯನ್ನು ಮೂವರು ಆರ್ಥಿಕ ತಜ್ಞರಿಗೆ ಘೋಷಿಸಲಾಗಿದೆ.