ಗಾಂಧಿನಗರ: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ನಡೆದ ಸೇತುವೆ ದುರಂತದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆಂದು ವಡೋದರಾ ಡಿಸಿ ಅನಿಲ್ ಧಮೇಲಿಯಾ ಮಾಹಿತಿ ನೀಡಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳು 4 ಕಿ.ಮೀ. ಕೆಳಭಾಗದವರೆಗೆ ಶೋಧಕಾರ್ಯ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಘಟನಾ ಸ್ಥಳದಲ್ಲಿ ಎರಡು ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡಿವೆ. ಆ ವಾಹನಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯಲಾಗುತ್ತಿದೆ. ಮಳೆಯಾಗುತ್ತಿರುವ ಕಾರಣ ನದಿಯ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಡಿಸಿ ಹೇಳಿದ್ದಾರೆ. ಇದನ್ನೂ ಓದಿ: ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ ಮಾಡುವ ಖಾತೆಗಳು ಕಂಡ್ರೆ ಸೈಬರ್ ಸೆಲ್‌ಗೆ ದೂರು ನೀಡಿ – ಸಿಎಂ
ಇನ್ನೂ ಸೇತುವೆ ಮೇಲೆ ತೂಗಾಡುತ್ತಿರುವ ಟ್ರಕ್ ಕುರಿತು ಮಾತನಾಡಿ, ಅದು ಖಾಲಿ ಟ್ಯಾಂಕರ್ ಆಗಿದ್ದು, ಅದನ್ನು ಸರಿಸಿದರೆ ಮತ್ತಷ್ಟು ಸೇತುವೆ ಕುಸಿದು ಬೀಳಲಿದೆ. ಸೇತುವೆ ಕೆಳಗಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಟ್ಯಾಂಕರನ್ನು ಅಲ್ಲೇ ಉಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

