ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ (Delhi liquor Policy Scam) ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ಶಾಸಕಿ ಕೆ.ಕವಿತಾ, ಪ್ರಕರಣದ ಸಾಕ್ಷ್ಯಾಧಾರಗಳಿದ್ದ 9 ಫೋನ್‌ಗಳನ್ನ ನಾಶ ಮಾಡಿದ್ದರು. ಜೊತೆಗೆ 10 ಲಕ್ಷ ರೂ. ಮೌಲ್ಯದ ಸ್ಟಾರ್ ಹೋಟೆಲ್‌ನಲ್ಲಿ ರೂಮ್ ಬುಕ್‌ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ (Delhi liquor Policy Scam) ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಕವಿತಾ ಅವರು ದೆಹಲಿಯಲ್ಲಿ ಆಡಳಿತಾರೂಢ ಆಪ್ ಪಕ್ಷಕ್ಕೆ ಮದ್ಯದ ಪರವಾನಿಗೆಗೆ ಬದಲಾಗಿ 100 ಕೋಟಿ ರೂ. ಪಾವತಿಸಲು ಸೌತ್ ಗ್ರೂಪ್ ಜೊತೆಗೂಡಿ ಪಿತೂರಿ ನಡೆಸಿದ್ದಾರೆ. ಜೊತೆಗೆ ಇಂಡೋ ಸ್ಪೀರಿಟ್‌ನ ಸ್ಟಾಕ್‌ನಲ್ಲಿ ಪಾಲನ್ನು ಧೀನಪಡಿಸಿಕೊಳ್ಳಲು ಸಂಚು ಹೂಡಿದ್ದರು. ಒಟ್ಟಾರೆ ಅಬಕಾರಿ ನೀತಿ ರದ್ದಾಗುವುದಕ್ಕೆ ಮುನ್ನ 192. 8 ಕೋಟಿ ರೂ.ಗಳಷ್ಟು ಲಾಭ ಗಳಿಸಿದ್ದಾರೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ. ಇದನ್ನೂ ಓದಿ: ಅಂಚೆ ಮತದಾನದ ಫಲಿತಾಂಶ: ಎನ್‌ಡಿಎ 304, ಇಂಡಿಯಾ ಕೂಟ 167, ಇತರೆ 30 ಕ್ಷೇತ್ರಗಳಲ್ಲಿ ಮುನ್ನಡೆ
ವಿವಿಧ ರೂಪದಲ್ಲಿ ಪಡೆದ 100 ಕೋಟಿ ರೂ. ಕಿಕ್‌ಬ್ಯಾಕ್ ಹಣವನ್ನ ಅಕ್ರಮ ಮಾರ್ಗಗಳ ಮೂಲಕ ಗೋವಾಕ್ಕೆ ಆಪ್ ಚುನಾವಣೆಗೆ ವರ್ಗಾವಣೆ ಮಾಡಲಾಗಿದೆ. ಕವಿತಾ ಮತ್ತು ಸಮೀರ್ ಮಹೇಂದ್ರು ಸೇರಿದಂತೆ ಇತರ ಸೌತ್ ಗ್ರೂಪ್ ಸದಸ್ಯರು ತಮ್ಮ ಈ ಅವ್ಯವಹಾರದ ಅಪರಾಧ ಮುಚ್ಚಿ ಹಾಕಲು ಎಲ್ಎನ್‌ಡೋ ಸ್ಪಿರಿಟ್ಸ್ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂಬ ಅಚ್ಚರಿ ಸಂಗತಿಗಳನ್ನೂ ಇಡಿ ತೆರೆದಿಟ್ಟಿದೆ. ಇದನ್ನೂ ಓದಿ: ಮಾಜಿ ಸಚಿವ ಎಂ.ಪಿ.ಕೇಶವಮೂರ್ತಿ ನಿಧನ
ಜು.3ರ ವರೆಗೆ ನ್ಯಾಯಾಂಗ ಬಂಧನ:
ದೆಹಲಿ ಮದ್ಯದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಜುಲೈ 3ರವರೆಗೆ ವಿಸ್ತರಿಸಿದೆ. ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ : ಸಿಸಿಬಿ ಕಚೇರಿಗೆ ಹಾಜರಾದ ನಟಿ ಹೇಮಾ

