Dhruva Sarja Birthday : ಸ್ಯಾಂಡಲ್‌ವುಡ್‌ನ ಆಕ್ಷನ್ ಕಿಂಗ್ ಆಗಿ ಖ್ಯಾತಿಯಲ್ಲಿರುವ ನಟ ಧ್ರುವ ಸರ್ಜಾ ತಮ್ಮ 36ನೇ ಹುಟ್ಟುಹಬ್ಬವನ್ನು ಭಾರೀ ಸಂಭ್ರಮದ ನಡುವೆ ಅಭಿಮಾನಿಗಳ ಜೊತೆ ಆಚರಿಸಿದರು.
ಹುಟ್ಟುಹಬ್ಬದ ಸಂಜೆ ನಟ ಧ್ರುವ ಸರ್ಜಾ ತಮ್ಮ ನಿವಾಸದ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಆತ್ಮೀಯವಾಗಿ ಭೇಟಿ ನೀಡಿದರು. ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ, ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಧ್ರುವ, ಈ ಕ್ಷಣಗಳನ್ನು ತಾವು ಎಂದಿಗೂ ಮರೆತಿರಲಾರೆಂದು ತಿಳಿಸಿದರು.
ಧ್ರುವ ಸರ್ಜಾ ಈಗಾಗಲೇ ಹಲವು ಹಿಟ್ ಚಿತ್ರಗಳ ಮೂಲಕ ತಮ್ಮದೇ ಆದ ಪ್ರೇಕ್ಷಕರನ್ನ ಗಳಿಸಿದ್ದು, ಅವರ ಮುಂದಿನ ಚಿತ್ರಗಳಿಗೂ ಭಾರೀ ನಿರೀಕ್ಷೆ ಇದೆ. ಜನ್ಮದಿನದ ಈ ಸಂದರ್ಭದಲ್ಲಿ ಅಭಿಮಾನಿಗಳು ಧ್ರುವಗೆ ಶುಭಾಶಯಗಳ ಮಹಾಪೂರವನ್ನ ಕಳಿಸಿದ್ದಾರೆ.
ಧ್ರುವ ಜನ್ಮ ದಿನಕ್ಕೆ ಹೊಸ ಪೋಸ್ಟರ್
ಧ್ರುವ ಸರ್ಜಾ ಕೆಡಿ ಪೋಸ್ಟರ್ ಭಯಂಕರವಾಗಿಯೇ ಇದೆ. ಶಾರ್ಟ್ ಹೇರ್ ಅಲ್ಲಿಯೇ ಧ್ರುವ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ರಾತ್ರಿ ಗಸ್ತು ಹೊಡೆಯೋಕೆ ಹೊರಟವರ ರೀತಿನೇ ಕಾಣಿಸುತ್ತಿದ್ದಾರೆ. ಊಟ ಮಾಡಿಯೇ ಹೋಗ್ತಿದ್ದಾರೆ ಅನಿಸುತ್ತದೆ. ಕಾರಣ ಅಷ್ಟು ಹಸಿವಿನಿಂದಲೇ ಇಲ್ಲಿ ಧ್ರುವ ಸರ್ಜಾ ಅದೇನೋ ಚಪ್ಪರಿಸಿ ತಿನ್ನುತ್ತಿದ್ದಾರೆ.
ಕೆಡಿ ಚಿತ್ರದಲ್ಲಿ ಧ್ರುವ ಲುಕ್ ಕಂಪ್ಲೀಟ್ ಚೇಂಜ್ ಆಗಿದೆ. ಶಾರ್ಟ್ ಹೇರ್ ಸ್ಟೈಲ್ ಇದೆ. ರಕ್ಷಸಿಕ್ತ ಮಚ್ಚು ಇದೆ. ಹೆಗಲ ಮೇಲೆ ಚಳಿಗೆ ಬಳಕೆ ಮಾಡೋ ಮಫ್ಲರ್ ಇದೆ. ಕಾಗದದಲ್ಲಿರೋದನ್ನ ಚಪ್ಪರಿಸಿ ತಿನ್ನುತ್ತಿದ್ದಾರೆ. ಆದರೆ, ಇದೇ ಧ್ರುವ ಸರ್ಜಾ ಹಿಂದೆ ಒಂದಷ್ಟು ಜನ ಇದ್ದಾರೆ. ಎಲ್ಲರ ಕೈಯಲ್ಲೂ ಕಂದೀಲು ಇದೆ. ಧ್ರುವ ಸರ್ಜಾ ಪಕ್ಕದಲೂ ಒಂದು ಲಾಟೀನು ಇದೆ. ಈ ಎಲ್ಲ ವಿಷಯ ಇರೋ ಕೆಡಿ ಚಿತ್ರದಹೊಸ ಪೋಸ್ಟರ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

