ಬೆಂಗಳೂರು: ರಾಜಸ್ಥಾನದಿಂದ ಕುರಿ ಮಾಂಸದ ಜತೆ ನಾಯಿಮಾಂಸವನ್ನೂ ಬೆಂಗಳೂರಿಗೆ ತರಿಸಿ ಹೋಟೆಲ್‌ಗಳಿಗೆ ನೀಡಲಾಗುತ್ತಿದೆ ಎಂಬ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಗಂಭೀರ ಆರೋಪದ ಹಿನ್ನೆಲೆಯಲ್ಲಿಶುಕ್ರವಾರ ನಗರದ ರೈಲು ನಿಲ್ದಾಣ ಹಿಂಭಾಗದಲ್ಲಿಹೈಡ್ರಾಮಾ ಸೃಷ್ಟಿಯಾಗಿತ್ತು.
ಹೋಟೆಲ್ ಗಳಲ್ಲಿ ಚಿಕನ್.. ಮಟನ್ ತಿನ್ನೋರು ಎಚ್ಚರ, ಮೆಜೆಸ್ಟಿಕ್ ನಲ್ಲಿ ನಾಯಿ ಮಾಂಸದ ದಂಧೆ ನಡೆಯುತ್ತಿದೆ. ಹೊರ ರಾಜ್ಯಗಳಿಂದ ಪ್ರತಿ ದಿನ ಬೆಂಗಳೂರಿಗೆ ಬರುತ್ತೆ ನಾಯಿ ಮಾಂಸ. 14 ಸಾವಿರ ಕೆ.ಜಿ ನಾಯಿ ಮಾಂಸ.ಬೆಂಗಳೂರಿನ ಹಲವು ಹೋಟೆಲ್ ಗಳಿಗೆ ನಾಯಿ ಮಾಂಸ ಸಾಗಾಟ ಆರೋಪ ಕೇಳಿಬಂದಿದೆ.
ರೈಲು ನಿಲ್ದಾಣದಲ್ಲಿಜಮಾಯಿಸಿದ್ದ ಹಲವು ಯುವಕರು, ಜೈಪುರದಿಂದ ನಾಯಿಮಾಂಸವನ್ನೂ ತರಲಾಗಿದೆ. ಇದೇ ಮಾಂಸವನ್ನು ಮೆಜೆಸ್ಟಿಕ್ ಸುತ್ತಮುತ್ತಲ ಹೋಟೆಲ್‌ಗಳಿಗೆ ನೀಡಿ ಬೇರೆ ಮಾಂಸದ ಜತೆ ಬೆರೆಸಲಾಗುತ್ತಿದೆ ಎಂದು ಆರೋಪಿಸಿದರು. ಈ ವಿಚಾರಕ್ಕೆ ಸಂಬಂಸಿದಂತೆ ಮಾಂಸದ ವ್ಯಾಪಾರಿಗಳ ಜತೆ ಜಟಾಪಟಿ ನಡೆಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಸಿಗೊಳಿಸಲು ಹರಸಾಹಸ ಪಟ್ಟರು.
ಪ್ರತಿಭಟನೆಗೆ ಮುಂದಾದ ಯುವಕರು ಮಾಂಸದ ಬಾಕ್ಸ್‌ಗಳನ್ನು ತೆರಯಲೇಬೇಕು ಎಂದು ಪಟ್ಟು ಹಿಡಿದರು. ಹಲವು ಬಾಕ್ಸ್‌ಗಳನ್ನು ತೆರೆದ ವ್ಯಾಪಾರಿಗಳು ಎಲ್ಲಾಬಾಕ್ಸ್‌ಗಳನ್ನು ತೆರೆಯಲು ನಿರಾಕರಿಸಿದರು. ಇದರಿಂದ ನಾಯಿ ಮಾಂಸದ ಬಾಕ್ಸ್‌ಗಳನ್ನೇ ತೆರೆಯುತ್ತಿಲ್ಲಎಂದು ಪುನಃ ವಾಗ್ವಾದ ಆರಂಭಿಸಿದರು. ವಿಷಯ ತಿಳಿದ ಕೂಡಲೇ ಆಹಾರ ಮತ್ತು ಸುರಕ್ಷತಾ ಅಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಂಸದ ಸ್ಯಾಂಪಲ್‌ಗಳನ್ನು ಪಡೆದರು.
ಆಹಾರ ಸುರಕ್ಷತಾ ಅಕಾರಿಗಳು ಈಗಾಗಲೇ ಮಾಂಸದ ಮಾದರಿ ಸಂಗ್ರಹಿಸಿದ್ದಾರೆ. ಪರಿಶೀಲಿಸಿದ ಬಳಿಕ ಯಾವ ಪ್ರಾಣಿಯ ಮಾಂಸ ಎಂದು ವರದಿ ನೀಡಲಿದ್ದಾರೆ. ವರದಿ ಬಂದ ಬಳಿಕವಷ್ಟೇ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದರು.

