ಬೆಂಗಳೂರು: ಕೆಆರ್ ನಗರದ ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ (Parapna Agrahara) ಜೈಲು ಸೇರಿದ್ದ ಹೆಚ್.ಡಿ. ರೇವಣ್ಣ (HD.Revanna) ಅವರಿಗೆ ಜಾಮೀನು (Bail) ಸಿಕ್ಕಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು (Fans) ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD.Kumarswamy) ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣಗೆ ಜಾಮೀನು ಸಿಕ್ಕಿತ್ತು ಅಂತ ನಾನು ಸಂತೋಷಪಡ್ತೀನಿ ಅಂದುಕೊಳ್ಳಬೇಡಿ. ಕಾರ್ಯಕರ್ತರು ಪಟಾಕಿ ಹೊಡೆಯಬೇಡಿ. ಈ ಮೂಲಕ ಸಂಭ್ರಮ ಪಡಬೇಡಿ. ಇದು ಸಂಭ್ರಮ ಪಡುವ ಸಮಯವಲ್ಲ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ದೊಡ್ಡ ತಿಮಿಂಗಿಲದ ಆಡಿಯೋ ಬಿಟ್ರೂ ಅಂತ ದೇವರಾಜೇಗೌಡ ಅರೆಸ್ಟ್ ಮಾಡಿಸಿದ್ದಾರೆ: ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಘಟನೆಯ ಸತ್ಯಾಸತ್ಯತೆ ಹೊರ ಬರಬೇಕು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಸಿಗಬೇಕು. ಆಗ ಸಂಭ್ರಮ ಮಾಡಿ. ಇದು ರಾಜ್ಯವೇ ತಲೆ ತಗ್ಗಿಸೋ ಘಟನೆ. ಪೆನ್‌ಡ್ರೈವ್ ಲೀಕ್ ಮಾಡಿರೋ ವ್ಯಕ್ತಿಯನ್ನ ಹುಡುಕಿಲ್ಲ ಎಂದು ಎಸ್ಐಟಿ ಅಧಿಕಾರಿಗಳ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಇದನ್ನೂ ಓದಿ: ಮೂರನೇ ಬಾರಿ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಮೋದಿ