ಬೆಂಗಳೂರು: ದೊಡ್ಡ ತಿಮಿಂಗಿಲದ ಆಡಿಯೋ ಬಿಟ್ರೂ ಅಂತ ದೇವರಾಜೇಗೌಡ (DevarajeGowda) ಅವರನ್ನ ಅರೆಸ್ಟ್ ಮಾಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (Dk. Shivakumar) ವಿರುದ್ಧ ಮಾಜಿ ಸಿಎಂ ಹೆಚ್ ಡಿ. ಕುಮಾರಸ್ವಾಮಿ (Kumaraswamy) ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ದೊಡ್ಡ ತಿಮಿಂಗಿಲ ಹಿಡಿದ್ರೆ ಎಲ್ಲಾ ಸತ್ಯ ಹೊರಬರುತ್ತೆ. ನನ್ನ ವಿರುದ್ಧ ಮಾತನಾಡೋಕೆ ಶಾಸಕರಿಗೆ ದೊಡ್ಡ ತಿಮಿಂಗಲವೇ ಹೇಳಿರೋದು ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮೂರನೇ ಬಾರಿ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಮೋದಿ
ದೊಡ್ಡ ತಿಮಿಂಗಿಲದ ಆಡಿಯೋ ಬಿಟ್ರೂ ಅಂತ ದೇವರಾಜೇಗೌಡ ಅರೆಸ್ಟ್ ಮಾಡಿಸಿದ್ದಾರೆ. ಯಾವ ದಾಖಲೆ ಬಿಡುಗಡೆ ಮಾಡೋಕೆ ದೇವರಾಜೇಗೌಡ ಹೊರಟಿದ್ರು. ದೇವರಾಜೇಗೌಡ ಬಂಧಿಸಿ ಯಾವ ದಾಖಲೆಯನ್ನ ಈ ಸರ್ಕಾರ ವಶಪಡಿಸಿಕೊಳ್ಳೋಕೆ ಹೊರಟಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ದಶಾಶ್ವಮೇಧ ಘಾಟ್‌ನಲ್ಲಿ ಮೋದಿಯಿಂದ ಗಂಗಾರತಿ
ರಾಷ್ಟ್ರೀಯ ಮಹಿಳಾ ಆಯೋದ ದೂರಿನದ್ದು ದೊಡ್ಡ ಕೇಸ್. ಯಾರು ಆಕೆಗೆ ಧಮ್ಕಿ ಹಾಕೋದು. ಹೆಣ್ಣು ಮಕ್ಕಳಿಗೆ ಯಾರು ಹೆದರಿಸಿದ್ದಾರೆ ಎಲ್ಲವೂ ಬರುತ್ತೆ. ನ್ಯಾಷನಲ್ ವುಮೆನ್ ಕಮೀಷನ್ ಕೊಟ್ಟ ದೂರು ಯಾಕೆ ತನಿಖೆ ಆಗಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

