ಚನ್ನಗಿರಿ: ‘ಒಂದು ಧರ್ಮ ಆಸ್ತಿತ್ವದಲ್ಲಿ ಇರಬೇಕಾದರೆ ಅದಕ್ಕೆ ಬೇಕಾಗಿರುವ ವಸ್ತು ಸಾಹಿತ್ಯ ಮತ್ತು ಗ್ರಂಥವಾಗಿದೆ. ಲಿಂಗಾಯಿತ ಧರ್ಮಕ್ಕೆ ವಚನ ಸಾಹಿತ್ಯ ಮೂಲಾಧಾರವಾಗಿದೆ’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಮಂಗಳವಾರ ನಡೆದ ವಚನ ಶಾಸ್ತ್ರ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಸ್ಮರಣೋತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಹಾಗೂ ಗ್ರಂಥಗಳು ಇಡೀ ಧರ್ಮದ ಸಾರವನ್ನು ತಿಳಿಸುತ್ತವೆ. ಆದರೆ ಯಾವುದೇ ಗ್ರಂಥಗಳು ಒಂದೇ ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ವಚನ ಶಾಸ್ತ್ರದ ಪಿತಾಮಹ ಫ.ಗು. ಹಳಕಟ್ಟಿಯವರು 12 ನೇ ಶತಮಾನದ ಶಿವಶರಣರ ವಚನಗಳನ್ನು ಸಂಗ್ರಹಿಸಿ ಗ್ರಂಥ ರೂಪಕ್ಕೆ ತರದೇ ಹೋಗಿದ್ದರೆ ನಾವು ಇಂದು ವಚನಗಳನ್ನು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ.
22 ಸಾವಿರಕ್ಕೂ ಹೆಚ್ಚು ಶರಣರ ವಚನಗಳನ್ನು ಸಂಶೋಧನೆ, ನಡೆಸಿ ಸಂಗ್ರಹಿಸಿ ತಮ್ಮ ಮನೆಯನ್ನು ಮಾರಿ ವಚನ ಸಾಹಿತ್ಯದ ಗ್ರಂಥವನ್ನು ಪ್ರಕಟಿಸಿದರು. ಆಗಾಗಿ ಅವರ ಪರಿಶ್ರಮದ ಫಲವಾಗಿ ಶರಣರ ವಚನಗಳು ಮನೆ ಮನದಲ್ಲಿ ಉಳಿಯುವಂತಾಗಿವೆ. ಇಂತಹ ಹಳಕಟ್ಟಿಯವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ವಚನ ಸಾಹಿತ್ಯ ಲಿಂಗಾಯಿತ ಧರ್ಮದ ಜೀ

