ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ವೈದ್ಯಕೀಯ ಪರೀಕ್ಷೆಗೆ (Medical Test) ಒಳಪಡಿಸಲಾಯಿತು. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಇತರೆ ರೋಗಿಗಳು ಪರದಾಡುವಂತಾಯಿತು.
ನಿನ್ನೆ ತಡರಾತ್ರಿ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ (SIT) ಅಧಿಕಾರಿಗಳು ಬಂಧಿಸಿದರು. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಅದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆ ನಡೆಸಲಾಯಿತು.ಇದನ್ನೂ ಓದಿ: ಕಬಿನಿಯಲ್ಲಿ ವಿಶ್ರಾಂತಿ ಪಡೆಯಲು ತೆರೆಳಿದ ಹೆಚ್‌ಡಿಕೆ ಕುಟುಂಬ
ಪ್ರಜ್ವಲ್ ವೈದ್ಯಕೀಯ ಪರೀಕ್ಷೆ ಹಿನ್ನಲೆ ಬೌರಿಂಗ್ ಆಸ್ಪತ್ರೆ ಬಳಿ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಬಿಗಿ ಭದ್ರತೆಯಿಂದಾಗಿ ಆಸ್ಪತ್ರೆಗೆ ಬಂದ ಇತರೆ ರೋಗಿಗಳು ಪರದಾಡುವಂತಾಯಿತು. ಆಟೋದಲ್ಲಿ ಎಮರ್ಜೆನ್ಸಿ ಎಂದು ಬಂದ ರೋಗಿಯನ್ನ ಸಹ ಗೇಟ್ ಬಳಿಯೇ ತಡೆದು ಸೆಕ್ಯೂರಿಟಿ ಗಾರ್ಡ್ಸ್ ದರ್ಪ ಮೆರೆದರು. ಮುಂದೆ ವಾಹನ ಬಿಡುವುದಿಲ್ಲ ಇಲ್ಲಿಂದ ನಡೆದುಕೊಂಡು ಹೋಗಿ ಎಂದು ತಡೆದರು. ಹೊಟ್ಟೆ ನೋವು ಅಂತಾ ಪೀಣ್ಯದಿಂದ ಬಂದಿದ್ದ ರೋಗಿಯನ್ನು ತಡೆದರು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ 3 ಅಧಿಕಾರಿಗಳಿಂದ ಪ್ರಜ್ವಲ್ ಬಂಧನ
ರೋಗಿಗಳಿಗೆ ತೊಂದರೆ ಆಗದಂತೆ ಆಸ್ಪತ್ರೆಗೆ ಬಿಡುವಂತೆ ಪೊಲೀಸರು ಸೂಚಿಸಿದ್ದಾರೆ. ನಂತರ ಸೆಕ್ಯೂರಿಟಿಗಳು ಮುಚ್ಚಿದ್ದ ಗೇಟ್ ತೆರೆದು ಎಂದಿನಂತೆ ರೋಗಿ ಮತ್ತು ಕುಟುಂಬದವರಿಗೆ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ವಿಮಾನ ಟೇಕ್ ಆಫ್ ಸಮಯದಲ್ಲಿ ಇಂಜಿನ್ನಲ್ಲಿ ಸಿಲುಕಿ ವ್ಯಕ್ತಿ ಸಾವು

