ಉತ್ತರ ಪ್ರದೇಶ: ಕೇಸರ್‌ಗಂಜ್‌ನ ಬಿಜೆಪಿ (BJP) ಅಭ್ಯರ್ಥಿ ಕರಣ್‌ಭೂಷಣ್ ಸಿಂಗ್(Karan Bhushan Singh) ಅವರ ಬೆಂಗಾವಲು ವಾಹನ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾದ ಕರ್ನಲ್‌ಗಂಜ್-ಹುಜೂರ್‌ಪುರ ರಸ್ತೆಯ ಬೈಕುಂತ್ ಪದವಿ ಕಾಲೇಜು ಬಳಿ ಸಂಭವಿಸಿದೆ
ಅಪಘಾತದ ನಂತರ ಚಾಲಕ ಕಾರು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಕತ್ರಾಬಜಾರ್, ಪರಸ್ಪುರ್, ಕೌಡಿಯಾ ಮತ್ತು ಕರ್ನಲ್ಗಂಜ್ ಪೊಲೀಸ್ ಠಾಣೆಗಳ ಪೊಲೀಸ್ ಪಡೆಗಳು ಸ್ಥಳಕ್ಕೆ ದೌಡಾಯಿಸಿವೆ. ಇದನ್ನೂ ಓದಿ: ಹಿಂದೂ ಯುವಕನ ಹಲ್ಲೆ ಪ್ರಕರಣ- ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ ಅಮಾನತು

ಈ ರಸ್ತೆಯಲ್ಲಿ ಸುಮಾರು ಒಂದು ಘಂಟೆಗಳ ಕಾಲ ಜಾಮ್ ಆಗಿತ್ತು. ಅಪಘಾತದ ಸಮಯದಲ್ಲಿ ಕರಣ್ ಭೂಷಣ್ ವಾಹನದಲ್ಲಿ ಇದ್ದರಾ ಎನ್ನುವ ಕುರಿತು ತನಿಖೆ ನಡೆಯುತ್ತಿದೆ.
ಈ ಕುರಿತು ಕರ್ನಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸ್ ಪಡೆ ಹಾಜರಿದ್ದು, ಸದ್ಯ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಇದನ್ನೂ ಓದಿ: ಕೇಜ್ರಿವಾಲ್ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಕರಣ್ ಸಿಂಗ್ ಕೇಸರ್‌ಗಂಜ್‌ನ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಅವರ ಮಗ ಕರಣ್ ತಂದೆ. ಈ ಹಿಂದೆ ಅವರು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದರು. ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ಮಹಿಳಾ ಕುಸ್ತಿಪಟುಗಳು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಅವರನ್ನು ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಯಿತು. ಅಷ್ಟೇ ಅಲ್ಲದೆ ಕೇಸರ್ಗಂಜ್ನಲ್ಲಿ ಅವರ ಬದಲಿಗೆ ಅವರ ಪುತ್ರ ಕರಣ್ಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದನ್ನೂ ಓದಿ: ಹಾಸನದ ಸಂಸದರ ನಿವಾಸದಲ್ಲಿ ಪರಿಶೀಲನೆ – ಪ್ರಜ್ವಲ್ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು ಇತರೆ ವಸ್ತು ಕೊಂಡೊಯ್ದ ಎಸ್‌ಐಟಿ

