ದೇವನಹಳ್ಳಿ: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Aiport) ಆಡಳಿತ ಮಂಡಳಿ, ಸಿಬ್ಬಂದಿ ಕಚೇರಿಯನ್ನು ಸ್ಫೋಟಿಸುವುದಾಗಿ ಶೌಚಾಲಯದ ಕನ್ನಡಿ ಮೇಲೆ ಬೆದರಿಕೆ ಸಂದೇಶ ಬರೆಯಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಕೂಡಲೆ ಶ್ವಾನದಳ ಹಾಗೂ ಸಿಐಎಸ್ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹುಸಿ ಬಾಂಬ್ (Fake bomb) ಬೆದರಿಕೆ ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದ ಆಲ್ಪಾ 3 ಬಿಲ್ಡಿಂಗ್ನಲ್ಲಿನ ಶೌಚಾಲಯದ ಕನ್ನಡಿ ಮೇಲೆ 25 ನಿಮಿಷದಲ್ಲಿ ಕಟ್ಟಡಗಳು ಸ್ಟೋಟವಾಗುವುದಾಗಿ ಬೆದರಿಕೆ ಸಂದೇಶ ಬರೆಯಲಾಗಿತ್ತು. ಬೆಳಗ್ಗೆ ಶೌಚಾಲಯಕ್ಕೆ ಸಿಬ್ಬಂದಿ ತೆರಳಿದ ವೇಳೆ ಬರಹವನ್ನು ನೋಡಿದ್ದಾರೆ. ಕೂಡಲೆ ಈ ವಿಚಾರವನ್ನು ಭದ್ರತಾ ಪಡೆಗೆ ತಿಳಿಸಿದ್ದಾರೆ. ಬೆದರಿಕೆ ಸಂದೇಶದಿಂದ ಸಿಬ್ಬಂದಿ ಹಾಗೂ ಭದ್ರತಾ ಪಡೆ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ- ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ
ಪರಿಶೀಲನೆ ಬಳಿಕ ಹುಸಿ ಬಾಂಬ್ ಸಂದೇಶ ಅಂತ ತಿಳಿದ ಮೇಲೆ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಸಿಬ್ಬಂದಿಯೇ ಹುಸಿ ಬೆದರಿಕೆ ಸಂದೇಶ ಬರೆದಿರುವ ಶಂಕೆ ವ್ಯಕ್ತವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಕೇಜ್ರಿವಾಲ್ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಏ.29 ರಂದು ವಿಮಾನ ನಿಲ್ದಾಣದ ಮ್ಯಾನೇಜರ್ ಅವರ ಮೇಲ್ಗೆ “ವಿಮಾನದಲ್ಲಿ ಟೈಂ ಬಾಂಬ್ ಇಡಲಾಗಿದೆ. ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ಜೊತೆಗೆ, ಗುಂಪಿನಿಂದ ಟರ್ಮಿನಲ್ 1 ರ ಒಳಗೆ ವಿವಿಧ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದೆ” ಅಂತ ಸಂದೇಶ ಬಂದಿತ್ತು. ಇದನ್ನೂ ಓದಿ: ಹಿಂದೂ ಯುವಕನ ಹಲ್ಲೆ ಪ್ರಕರಣ- ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ ಅಮಾನತು

