ಬೆಂಗಳೂರು: ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ 54ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬ ಆಚರಿಸಲು ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಸೆಪ್ಟೆಂಬರ್ 1ರಂದೇ ದೊಡ್ಡ ಉಡುಗೊರೆ ಸಿಕ್ಕಿದೆ.
ಸುದೂಪ್ ಅವರ ಮುಂದಿನ ಚಿತ್ರದ ಟೈಟಲ್ ಪ್ರಕಟಿಸಲಾಗಿದ್ದು, ಫಸ್ಟ್ ಲುಕ್ ಟೀಸರ್ ಕೂಡ ರಿಲೀಸ್ ಆಗಿದೆ. ಕಳೆದ ವರ್ಷ ತೆರೆಕಂಡ ಮ್ಯಾಕ್ಸ್ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿತ್ತಿರುವ ಈ ಚಿತ್ರಕ್ಕೆ ‘ಮಾರ್ಕ್’ (Mark) ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼಕೆ 47ʼ (K 47) ಟೈಟಲ್ ಇಟ್ಟು ಜುಲೈಯಲ್ಲಿ ಶೂಟಿಂಗ್ ಆರಂಭಿಸಲಾಗಿತ್ತು.
ಇದೀಗ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಗಮನ ಸೆಳೆದಿದ್ದು, ಸುದೀಪ್ ಮತ್ತೊಮ್ಮೆ ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ಅಜಯ್ ಮಾರ್ಕಾಂಡೆ ಆಲಿಯಾಸ್ ಮಾರ್ಕ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ʼಮ್ಯಾಕ್ಸ್ʼನಂತೆ ಭರ್ಜರಿ ಆ್ಯಕ್ಷನ್ ಚಿತ್ರ ಎನ್ನುವ ಸೂಚನೆ ಟೀಸರ್‌ನಲ್ಲೇ ಸಿಕ್ಕಿದೆ.

