ಬೆಂಗಳೂರು.ಜು. 17: ಬೆಂಗಳೂರಿನ ಪ್ರತಿಷ್ಠಿತ ಜಿಟಿ ಮಾಲ್‌ನಲ್ಲಿ ಅನ್ನದಾತನಿಗೆ ಅವಮಾನ ಮಾಡಲಾಗಿದೆ. ಪಂಚೆ ಹಾಕಿ ಬಂದಿದ್ದ ರೈತನಿಗೆ ಮಾಲ್‌ನಲ್ಲಿ ಪ್ರವೇಶ ನೀಡಲಾಗಿಲ್ಲ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ಈ ಘಟನೆ ನಡೆದಿದೆ. ಮಾಲ್‌ನಲ್ಲಿ ಸಿನಿಮಾ ನೋಡಲು ಅಪ್ಪ-ಮಗ ಇಬ್ಬರು ಬಂದಿದ್ದರು.
ಪಂಚೆ ಹಾಕಿರೋ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ. ನೀವು ಪ್ಯಾಂಟ್ ಹಾಕಿದ್ದೀರಿ ಒಳಗಡೆ ಹೋಗಬಹುದು ಅಂತ ಮಗನಿಗೆ ಹೇಳಿದ್ದಾರೆ. ಆದ್ರೆ ಅಪ್ಪನಿಗೆ ಪ್ರವೇಶ ನಿರಾಕರಿಸಿದ್ದಾರೆ.ರೈತನಿಗೆ ಕೆಲದಿನಗಳ ಹಿಂದೆ ಮೆಟ್ರೋದಲ್ಲಿ ಪ್ರವೇಶ ನಿರ್ಬಂಧ ಮಾಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಮಾಲ್ ನಲ್ಲಿ ಪ್ರವೇಶ ನಿರಾಕರಿಸಿದಕ್ಕೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ.
ರೈತ ಫಕೀರಪ್ಪ ಎಂಬುವವರಿಗೆ ಜಿಟಿ ವರ್ಲ್ಡ್ ಮಾಲ್‌ನಲ್ಲಿ ಪ್ರವೇಶ ನಿರಾಕರಿಸಿದ್ದಾರೆ. ಈ ಘಟನೆಗೆ ನೆಟ್ಟಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತ ಬೆಳೆಯುವ ಬೆಳೆ ಬೇಕು. ರೈತನಿಗೆ ಮರ್ಯಾದೆ ಕೊಡೋಕೆ ಬರಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನೂ ಕೆಲ ನೆಟ್ಟಿಗರು ಪಂಚೆ ಹಾಕಿ ಬಂದ್ರೆ ಏನು ತಪ್ಪು. ಕಾಸು ಕೊಟ್ಟು ಸಿನಿಮಾ ನೋಡೋಕೆ ಅವರು ಬಂದಿರೋದು, ಫ್ರೀಯಾಗಿ ನೋಡೋಕೆ ಅಲ್ವಲ್ಲ ಅಂತ ಮಾಲ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಕೆಲವರು ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನ್ನದಾತನಿಗೆ ಕೊಡುವ ಮರ್ಯಾದೆ ಕೊಡಬೇಕು. ಹೀಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸುತ್ತಿದ್ದಾರೆ.