ಚೆನ್ನೈ: ಕಾವೇರಿ ನೀರನ್ನು (Cauvery Water) ತಮಿಳುನಾಡಿಗೆ (Tamil Nadu Farmers) ಬಿಡುವಂತೆ ಆಗ್ರಹಿಸಿ ರೈತರು Farmers) ತಿರುಚಿರಾಪಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಒತ್ತಾಯಿಸಿ ರೈತ ಅಯ್ಯಕಣ್ಣು ನೇತೃತ್ವದಲ್ಲಿ ರೈತರ ಗುಂಪು ಮುಕ್ಕೊಂಬು ಅಣೆಕಟ್ಟೆಯಲ್ಲಿ ಪ್ರತಿಭಟನೆ ನಡೆಸಿತು. ಇದನ್ನೂ ಓದಿ: ಒಂದು ವೋಟು ಸಹ ಸುಧಾಕರ್‌ಗೆ ಜಾಸ್ತಿ ಬಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಪ್ರದೀಪ್ ಈಶ್ವರ್

ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವುದು ಮುಂತಾದ ಭರವಸೆಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದೇ ವೇಳೆ ಒತ್ತಾಯಿಸಿದರು. ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಾರದ ಹಿಂದೆಯಷ್ಟೇ ಸೂಚನೆ ನೀಡಿತ್ತು. ಇದನ್ನೂ ಓದಿ: ಕಾಸರಗೋಡಿನಲ್ಲಿ ಲವ್ ಜಿಹಾದ್ – ಹಿಂದೂ ಶಿಕ್ಷಕಿಯನ್ನ ಮದ್ವೆಯಾದ ಮುಸ್ಲಿಂ ಯುವಕ!
ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ನೀರು ಹರಿಸಲು ಪ್ರಾಧಿಕಾರ ನಿರ್ದೇಶನ ನೀಡಿತ್ತು. ಈ ಹಿಂದೆ ಕಾವೇರಿ ನೀರು ನಿರ್ವಹಣಾ ಸಮಿತಿಯೂ 2.5 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಆಪ್ ಮದುವೆ ಮಾಡಿಕೊಂಡಿಲ್ಲ: ಕೇಜ್ರಿವಾಲ್

