ಬೆಂಗಳೂರು: ಮೊಬೈಲ್ ವಿಚಾರಕ್ಕೆ ಫುಡ್ ಡೆಲಿವರಿ (Food Delivery) ಬಾಯ್‌ಗೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಮಂಗಳಮುಖಿ (Transgender) ಸೇರಿ ನಾಲ್ವರ ಬಂಧನ ಮಡಿರುವ ಘಟನೆ ತಡವಗಿ ಬೆಳಕಿಬೆ ಬಂದಿದೆ.
ಮಂಗಳಮುಖಿ ಡಾಮಿನಿ ಮತ್ತು ಆಕೆಯ ಸಹಚರರಾದ ಮರಿಯನ್, ನಾಗೇಂದ್ರ ಮತ್ತು ಕಿರಣ್ ಬಂಧಿತರು. ಏ.25ರಂದು ರಾತ್ರಿ ಕಂಠೀರವ ಸ್ಟುಡಿಯೋ ಬಳಿ ಮಂಜು ಫುಡ್‌ಆರ್ಡರ್ ಸಲುವಾಗಿ ಕಾಯುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಮಂಗಳಮುಖಿ ಡಾಮಿನಿ ಪರಿಚಯವಾಗಿದೆ. ಈ ಸಂದರ್ಭದಲ್ಲಿ ಮಂಜು ಮೊಬೈಲ್ ಡಾಮಿನಿ ಬಳಿ, ಡಾಮಿನಿ ಮೊಬೈಲ್ ಮಂಜು ಬಳಿ ಅದಲು-ಬದಲು ಆಗಿದೆ. ಮೊಬೈಲ್ ಬದಲಾದ ವಿಚಾರ ಗೊತ್ತಾದ ಬಳಿಕ ಡಾಮಿನಿ ಕರೆ ಮಾಡಿ ಮೊಬೈಲ್ ವಾಪಾಸ್ ತಂದು ಕೊಡುವಂತೆ ಮಂಜುಗೆ ಹೇಳಿದ್ದಾರೆ. ಇದನ್ನೂ ಓದಿ: ಬಿಸಿಲಿಗೆ ಬೇಯುತ್ತಿರುವ ಬೆಂಗಳೂರು ಮಂದಿ
ಆದರೆ ಮಂಜು ತುರ್ತು ಕೆಲಸದ ನಿಮಿತ್ತ ಮೂರು ದಿನ ಸಿಕ್ಕಿರಲಿಲ್ಲ. ಆ ನಂತರ ಏ.28ರಂದು ಮೊಬೈಲ್ ವಾಪಾಸ್ ಕೊಡಲು ಮಂಜು ಸ್ನೇಹಿತನ ಜತೆ ನಾಗರಭಾವಿ ಸರ್ವೀಸ್ ರಸ್ತೆ ಬಳಿ ಬಂದು ಡಾಮಿನಿಗೆ ಕರೆ ಮಾಡಿದ್ದ. ತನ್ನ ಸಹಚರರ ಜತೆ ಕಾರಿನಲ್ಲಿ ಬಂದ ಡಾಮಿನಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ಬಿಯರ್ ಬಾಟೆಲ್‌ನಿಂದ ಮಂಜು ತಲೆಗೆ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿಯಲು ಮುಂದಾದ್ದಾಗ ಮಂಜು ಕೈ ಅಡ್ಡ ಇಟ್ಟಿದ್ದಕ್ಕೆ ಆತನ ಕೈಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲೇ ಇದ್ದ ಮುಂಜು ಸ್ನೇಹಿತ ಹೆದರಿ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಸಿಟಿಲ್ಲಿ ಸ್ಮಾಟ್ ಆದ ನಮ್ಮ ಮೆಟ್ರೋ
ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜುನನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

