ಬೆಂಗಳೂರು, ಡಿ.07: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ವತಿಯಿಂದ ಇಂದು ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ.ಗೋಪಾಲಯ್ಯ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಜಯರಾಮ್, ರಾಜೀವ್ ಗಾಂಧಿ ಸನೆಟ್ ಸದಸ್ಯರಾದ ಡಾಕ್ಟರ್ ಮಂಜುನಾಥ್, ಗೌಡ ಡಾಕ್ಟರ್ ಸಂಜಯ್ ಗೌಡ,ಬಿಬಿಎಂಪಿ ಮಾಜಿ ಸದಸ್ಯ ಮಹದೇವು, ರೈಲ್ವೆ ನಾರಾಯಣ್, ಡಾಕ್ಟರ್ ನಾಗೇಂದ್ರ ,ಅವಿನ ಆರಾಧ್ಯ,ಉಮಾಪತಿ ನಾಯ್ಡು, ವೆಂಕಟೇಶ್,
ವೆಂಕಟೇಶ್ ಮೂರ್ತಿ, ಸಾಯಿ ರೆಡ್ಡಿ, ಪುಟ್ಟಣ್ಣ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

