ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಪಿಎಲ್ ಕಾರ್ಡದಾರರಿಗೆ ಗುಡ್‌ನ್ಯೂಸ್ ಕೊಟ್ಟಿದ್ದು, ಉಚಿತ ಕಸಿ ಶಸ್ತ್ರಚಿಕಿತ್ಸೆ ಪಡೆಯಲು ಅವಕಾಶವನ್ನು ಕಲ್ಪಿಸುತ್ತಿದೆ. ಕರ್ನಾಟಕ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಮೂತ್ರಪಿಂಡ, ಹೃದಯ,ಯಕೃತ್ ಮತ್ತು ಬಹು ಅಂಗಾಂಶ ವೈಫಲ್ಯದ ಚಿಕಿತ್ಸೆಗೆ ಉಚಿತ ತಜ್ಞ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ₹2 ಲಕ್ಷದಿಂದ ₹22 ಲಕ್ಷದವರೆಗೆ ಖರ್ಚಾಗುವ ಈ ಚಿಕಿತ್ಸೆಗಳನ್ನ ಉಚಿತವಾಗಿ ನೀಡಲಾಗುತ್ತಿದ್ದು, ಅಗತ್ಯವಿರುವವರ ಬಳಕೆ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದೆ.
ಈ ಚಿಕಿತ್ಸೆಯನ್ನ ಪಡೆಯಲು ಮೊದಲು ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಹೋಗಿ ಅಥವಾ ಆಸ್ಪತ್ರೆಗೆ ಹೋಗಿ ಅಲ್ಲಿ ಬೇಕಾದ ದಾಖಲೆಗಳನ್ನ ಕೊಟ್ಟು ಚಿಕಿತ್ಸೆಯನ್ನ ಪಡೆಯಬಹುದು. ಇದಲ್ಲದೇ, ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಆನ್ಲೈನ್ ಮೂಲಕ ಫಾರ್ಮ್ ಅನ್ನು ಫಿಲ್ ಮಾಡಿ ಸಹ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಚಿಕಿತ್ಸೆ ಪಡೆಯಲು ವ್ಯಕ್ತಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಇರಲೇಬೇಕು. ಇದರ ಜೊತೆಗೆ ವ್ಯಕ್ತಿಗೆ ಮೂತ್ರಪಿಂಡ, ಹೃದಯ, ಯಕೃತ್ ಅಥವಾ ಬಹು ಅಂಗಾಂಶ ವೈಫಲ್ಯ ಈ ಸಮಸ್ಯೆಗಳಿದ್ದರೆ ಮಾತ್ರ ಉಚಿತ ಚಿಕಿತ್ಸೆ ಸಿಗಲಿದೆ.

