ಯಾದಗಿರಿ : ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಭವ್ಯ ಅಲಾಂಕರದ ಪಲ್ಲಕ್ಕಿ ಉತ್ಸವವು ಶ್ರೀ ಕರಿದೇವರ ದೇವಸ್ಥಾನದಿಂದ ಭವ್ಯ ಮೆರವಣಿಗೆಯ ಮುಖಾಂತರ
ಮಾವಿನಮಟ್ಟಿ ಗ್ರಾಮದ ಹಿರಿ ಹಳ್ಳದಲ್ಲಿ ಗಂಗಸ್ತಾನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಕಲ ವ್ಯದ್ಯ ಮೇಳದೊಂದಿಗೆ ಕುಂಭ ಕಳಸ ಹೊತ್ತು ಮೆರವಣಿಗೆಯ ಮೂಲಕ
ಶ್ರೀ ಶ್ರೀ ಗಡ್ಡದರಾಯ ಮುತ್ಯಾ* ನವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಮೆರವಣಿಗೆಯ ಮೂಲಕ ತಲುಪಿದರು ಹಾಗೂ ಡೊಳ್ಳು ಕುಣಿತ ನೋಡಗರ ಗಮನ ಸೆಳೆಯಿತು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಸುತ್ತಮುತ್ತಲಿನ ಗ್ರಾಮದ ಸುಮಾರು ಸಾವಿರಾರು ಜನಕ್ಕೆ ಅನ್ನ ಪ್ರಸಾದವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಯಪ್ಪ ಪೂಜಾರಿ ,ಶ್ರೀ ಅಯ್ಯಾಳಪ್ಪ ಪೂಜಾರಿ* ಹಾಗೂ ಸಕಲ ಸದ್ಭಕ್ತರು ಮಾವಿಣಮಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ವೆಂಕಟೇಶ್ ಯಾದವ

