ಬೆಂಗಳೂರು: ಸೆಂಟ್ರಲ್ ಜೈಲ್‌ನಲ್ಲಿ (Central Jail) ಸಿನಿಮಾ ಶೈಲಿಯಲ್ಲಿ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ (Gang War) ನಡೆದಿದೆ. ನಟೋರಿಯಸ್ ರೌಡಿ ಶೀಟರ್ ಕುಳ್ಳು ರಿಜ್ವಾನ್ ಹಾಗೂ ಸಾಗರ್ ಎಂಬ ಎರಡು ಗುಂಪುಗಳ ನಡುವೆ ಅಟ್ಯಾಕ್ ನಡೆದಿದೆ.
ಜೈಲಿನ ಮೂರನೇ ಬ್ಯಾರಕ್ ಮುಂದೆ ಸಾಗರ್, ತೇಜಸ್, ರಾಕೇಶ , ಗುರುಪ್ರಾದ್ ಸೇರಿದಂತೆ 8 ಜನರ ಮೇಲೆ ಕುಳ್ಳು ಶಿಷ್ತಾರಾದ ವಿಶ್ವ, ಜಾಫರ್, ಟಿಪ್ಪು, ಮುನಿರಾಜ್, ಸೇರಿದಂತೆ ಎಂಟತ್ತು ಹುಡುಗರು ಜೈಲು ಆವರಣದಲ್ಲಿದ್ದ ಕಲ್ಲು ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಸಾಗರ್ ಅನ್ನೋ ಕ್ರಿಕೆಟ್ ಬುಕ್ಕಿನಾ ಕಿಡ್ನಾಪ್ (Kidnap) ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದು, ಲಾಕ್ ಆಗಿದ್ದರು.
ಇನ್ನು ಕಿಡ್ನಾಪ್ ಆಗಿದ್ದ ಸಂತೋಷ ಕುಳ್ಳು ರಿಜ್ಚಾನ್ ಹಫ್ತಾ ಕೊಡ್ತಿದ್ದಾನೆ ನಮಗೆ ಕೊಡ್ತಿಲ್ಲ ಅಂತ ಈ ಕಿಡ್ನಾಪ್ ಮಾಡಿದರು. ಇದೇ ವಿಚಾರಕ್ಕೆ ಕೋಪಗೊಂಡಿದ್ದ ಕುಳ್ಳು ಸಾಗರ್ ಅಂಡ್ ಟೀಂ ಮೇಲೆ ಕತ್ತಿ ಮಸೆಯುತ್ತಿದ್ದ. ಕಿಡ್ನಾಪ್ ಕೇಸ್ ನಲ್ಲಿ ಜೈಲು ಸೇರಿದ್ದ ಹುಡುಗರು ಕ್ವಾರಂಟೈನ್ ಬ್ಯಾರಕ್ ನಲ್ಲಿದ್ರು. ನಂತರ ಜೈಲಿನ ಬ್ಯಾರಕ್ ಗೆ ಶಿಫ್ಟ್ ಆಗ್ತಿದ್ದಂತೆ ಕುಳ್ಳು ಹುಡುಗರು ಸಾಗರ್ ಅಂಡ್ ಟೀಮ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ: ಇಂದು ಪ್ರಜ್ವಲ್ ರೇವಣ್ಣ ಎಸ್‍ಐಟಿ ಕಸ್ಟಡಿ ಅಂತ್ಯ – ಮತ್ತೊಮ್ಮೆ ಕಸ್ಟಡಿಗೆ ಕೇಳುವ ಸಾಧ್ಯತೆ
ಘಟನೆಯಲ್ಲಿ ಗಾಯಗೊಂಡ ʼಸಾಗರ್ ಸೇರಿ ಕೆಲವರಿಗೆ ಗಾಯವಾಗಿದ್ದು ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಘಟನೆ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮಂಡ್ಯಕ್ಕೆ ಮತ್ತೆ ಖುಲಾಯಿಸಿದ ಮಂತ್ರಿ ಲಕ್ – 25 ವರ್ಷದ ಬಳಿಕ ಕೇಂದ್ರದಲ್ಲಿ ಜೆಡಿಎಸ್‌ಗೆ ಮಂತ್ರಿ ಸ್ಥಾನ