ಇದು ಕಲಿಗಾಲನೋ ಅಥ್ವಾ ಕಾಮುಕ ಕಾಲಾನೋ ಒಂದೂ ಗೊತ್ತಾಗ್ತಿಲ್ಲ.. ಹೆಣ್ಮಕ್ಕಳು ಹೊರಗೆ ಹೋಗೋದಕ್ಕೆ ಭಯ ಪಡುವಂತಾಗಿದೆ.. ಗಾಂಜಾ ಘಾಟಲ್ಲಿ ಮುಳುಗೇಳ್ತಿರೋರು ಬೀದಿಬೀದಿಯಲ್ಲಿ ಅಟ್ಟಹಾಸ ಮೆರಿತಿದ್ದಾರೆ.. ಕಾಮಾಂಧರರ ಕೃತ್ಯಕ್ಕೆ ಒಂಟಿ ಹೆಣ್ಮಗಳು ವಿಲವಿಲ ಒದ್ದಾಡಿ ಹೋಗಿದ್ದಾಳೆ.. ನಶಾಸುರರ ಕ್ರೌರ್ಯಕ್ಕೆ ಬೆಂಗಳೂರು ಮಂದಿ ಬೆಚ್ಚಿಬಿದ್ದಿದ್ದಾರೆ.. ಇದೇ ಈ ಹೊತ್ತಿನ ವಿಶೇಷ.. ಗಾಂಜಾ ಗ್ಯಾಂಗ್, ಒಬ್ಬಂಟಿ ಹೆಣ್ಮಗಳು ವಿಲವಿಲ
ಕಲಿಗಾಲ ಅನ್ನೋದು ಕೆಟ್ಟು ಕುಲಗೆಟ್ಟೋಯ್ತು ಕಣ್ರಿ.. ಕಾಸ್ಲಿ ದುನಿಯಾ ಅನ್ನೋದು ಎಕ್ಕುಟ್ಟೋಗಿದೆ.. ಇದೇನ್ ಜಗತ್ತೋ ಏನೋ ಒಂದೂ ಗೊತ್ತಾಗ್ತಿಲ್ಲ.. ಎಲ್ಲಿ ನೋಡಿದ್ರು ನಶೆ ರಾಕ್ಷಸರ ಅಟ್ಟಹಾಸ ಹೆಚ್ಚಾಗಿದೆ.. ಬೀದಿ ಬೀದಿಯಲ್ಲೂ ಕಾಮಣ್ಣರ ಕ್ರೌರ್ಯ ಮಿತಿ ಮೀರಿದೆ.. ಇನ್ನು ಮೂತಿ ಮೇಲೆ ಸರಿಯಾಗಿ ಮೀಸೆನೆ ಚಿಗುರಿರಲ್ಲ.. ಆಗ್ಲೇ ಮಾದಕ ವ್ಯಸನಿಗಳಲ್ಲೆ ಮುಳುಗೇಳ್ತಿರ್ತಾರೆ.. ಗಾಂಜಾ, ಡ್ರಗ್ಸ್, ಸಿಗರೇಟ್ ಎಣ್ಣೆಯಲ್ಲೇ ತೇಲಾಡ್ತಿದ್ದಾರೆ.. ಮಾಯಾ ಲೋಕದಲ್ಲಿ ನಶೆಯ ಕಾಮುಕರ ಹುಚ್ಚಾಟ ಎಲ್ಲೆ ಮೀರಿದೆ.. ನಶೆ ನೆತ್ತಿಗೇರಿಸಿಕೊಂಡವ್ರು ಹೆಣ್ಮಕ್ಕಳಿಗೆ ಟಾರ್ಚರ್ ಕೊಡ್ತಾರೆ.. ರಸ್ತೆಯಲ್ಲಿ ಒಂಟಿ ಹೆಣ್ಮಕ್ಕಳು ಕಾಣಿಸಂಗಿಲ್ಲ ನಾಯಿಯಂತೆ ಬೌಬೌ ಅನ್ನೋಕೆ ಶುರು ಮಾಡ್ತಾರೆ.. ಆನೇಕಲ್ ನಲ್ಲೂ ನಶೆರಾಕ್ಷಸರ ಕಾಟಕ್ಕೆ ಒಬ್ಬೊಂಟಿ ಲೇಡಿ ಒದ್ದಾಡಿದ್ದಳೆ.. ಕಾಮುಕರ ಕಿರುಕುಳಕ್ಕೆ ಸಿಂಗಲ್ ಲೇಡಿ ಸಿಡಿದೆದ್ದಿದ್ದಾಳೆ..
ನೋಡಿ.. ನೋಡಿ.. ಇವ್ರ ಅವತಾರವನ್ನ… ನಿಲ್ಲೋಕು ಆಗ್ತಿಲ್ಲ.. ಓಡಾಡೋಕು ಆಗ್ತಿಲ್ಲ.. ಅತ್ತೊಂದು ಕಾಲ್ ಇತ್ತೊಂದು ಕಾಲ್ ಹಾಕ್ತಿದ್ದಾರೆ.. ಹುಚ್ಚರಂತೆ ವರ್ತಿಸ್ತಿರೋ ಇವ್ರು ಗಾಂಜಾ ನೆತ್ತಿಗೇರಿಸಿಕೊಂಡಿರೋ ಪುಂಡರು.. ಇವ್ರ ಕಾಟಕ್ಕೆ ಈ ಹೆಣ್ಮಗಳು ನಲುಗಿಹೋಗಿದ್ದಾಳೆ.. ರಣರಾಕ್ಷಸರಂತೆ ಕ್ರೌರ್ಯ ಮೆರಿತಿರೋ ಇವ್ರನ್ನ ನೋಡ್ತಿದ್ರೆ ರಕ್ತ ಕುದಿಯುತ್ತೆ.. ಇಂಥಾ ಕೃತ್ಯಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರಿನ ಬನ್ನೇರುಘಟ್ಟದ ರೇಣುಕಾ ಯಲ್ಲಮ್ಮ ಬಡಾವಣೆ..
ಇಷ್ಟಕ್ಕೂ ಆ ಗಾಂಜಾ ಗ್ಯಾಂಗ್ ಯಾರಂತನೂ ಆ ಹೆಣ್ಮಗಳಿಗೆ ಗೊತ್ತಿಲ್ಲ.. ಜಸ್ಟ್ ಒಂದು ವಾರವಾಗಿತ್ತು ಅಷ್ಟೆ ಆ ಏರಿಯಾಗೆ ಶಿಫ್ಟ್ ಆಗಿ.. ತನ್ನ ಪಾಡಿಗೆ ತಾನು ಕೆಲಸ ಮಾಡ್ಕೊಂಡು ಬದುಕ್ತಿದ್ಲು.. ಅಲ್ಲೆ ಪಕ್ಕದ ಏರಿಯಾದಲ್ಲಿ ಅಣ್ಣನ ಮನೆ ಇದ್ದಿದ್ರಿಂದ ಈಕೆ ಇಲ್ಲಿ ಮನೆ ಮಾಡಿದ್ಲು.. ಆದ್ರೆ ಈ ಕಾಮಾಂದರರಿಗೆ ಈಕೆ ಮೇಲೆ ಅದೇನ್ ದ್ವೇಷ ಇತ್ತೋ, ಸೇಡಿತ್ತೋ ಆ ದೇವ್ರೆ ಬಲ್ಲ.. ಗಾಂಗಾ ನಶೆಯಲ್ಲಿ ಓಲಾಡ್ತಿದ್ದವ್ರು ಮೃಗಗಳಂತೆ ಎರಗಿದ್ದಾರೆ.. ಅಂಗಡಿಗೆ ಹೋಗ್ತಿದ್ದವಳನ್ನ ತಡೆದು ಬಾಯಿಗೆ ಬಂದಾಗೆ ಬೈದಿದ್ದಾರೆ.. ಪಾಪ ಆಕೆ ಒಂಟಿ ಹೆಣ್ಮಗಳು.. ಇವ್ರ ರಾಕ್ಷಸತನಕ್ಕೆ ಬೆಚ್ಚಿಬಿದ್ದಿದ್ಲು.. ಗಾಂಜಾ ಘಾಟಲ್ಲಿದ್ದವ್ರ ಕ್ರೌರ್ಯ ನೋಡಿ ಹೆಂಗಪ್ಪ ಇವ್ರಿಂದ ತಪ್ಪಿಸಿಕೊಳ್ಳೋದು ಅಂತಾ ಯೋಚಿಸ್ತಿದ್ಲು.. ಆಗಲೇ ಕಾಲಲ್ಲಿ ಒದ್ದಿದ್ದಾಳೆ.. ಆದ್ರೆ ಈ ಕಿಡಿಗೇಡಿಗಳು ಬಿಡಬೇಕಲ್ವಾ ಅಬ್ಬರಿಸಿ ರಂಪರಾಮಾಯಣ ಮಾಡಿದ್ದಾರೆ..
ಇವ್ರನ್ನ ಪಕ್ಕಾ 420 ಅಂದ್ರೆ ತಪ್ಪಾಗಲ್ಲ.. ಮನೆಗೂ ಮಾರಿ.. ಊರಿಗೂ ಮಾರಿ.. ಒಟ್ನಲ್ಲಿ ಯಾರಿಗೋ ಬೇಡದ ಕೆಟ್ಟ ಹುಳುಗಳು ಇವ್ರು.. ಮನೆಯವ್ರ ಉಗಿದು ಉಪ್ಪಾಕಿರುವಾಗ ಮತ್ತೆ ಅದೇ ಕೆಟ್ಟ ಚಟಗಳಿಂದ ಮತ್ತಷ್ಟು ಹುಚ್ಚಾಟ ಆಡ್ತಿದ್ದಾರೆ.. ದಿನ ಬೆಳಗಾದ್ರೆ ನಶೆಯಲ್ಲೇ ಮುಳುಗೇಳ್ತಿದ್ದರು.. ಈಕೆಯನ್ನ ಫಾಲೋ ಮಾಡ್ತಿದ್ರೋ ಅಥ್ವಾ ಕಾಮದ ಕಣ್ಣಾಗಿದ್ರೋ ಕೊಡಬಾರದ ಕಾಟ ಕೊಟ್ಟಿದ್ದಾರೆ.. ತಕ್ಷಣ ಹೆಣ್ಮಗಳು ತನ್ನ ಜಿಮ್ ಟ್ರೈನರ್ಗೆ ಕಾಲ್ ಮಾಡಿ ರಕ್ಷಣೆ ಕೇಳಿದ್ದಾಳೆ.. ಕೂಡಲೇ ಬಂದ ಜಿಮ್ ಟ್ರೈನಲ್ ಮತ್ತು ಅಲ್ಲೇ ಇದ್ದ ಸ್ಥಳೀಯರೆಲ್ಲಾ ಸೇರಿ ರಕ್ಷಿಸಿದ್ದಾರೆ.. ಇಷ್ಟಾದ್ರು ಕಿಡಿಗೇಡಿಗಳ ಅಟ್ಟಹಾಸ ಮಾತ್ರ ನಿಂತಿಲ್ಲ.. ಕಾಂಪೌಡ್ ಹಾರಿ ಹೊಡಿಯೋಕೆ ಬಂದಿದ್ದಾರೆ.. ಮಹಿಳೆ ಅನ್ನೋದು ನೋಡದೆ ಕೃತ್ಯ ಎಸಗಿದ್ದಾರೆ.. ಅಲ್ಲೂ ಅವ್ರು ಗಾಂಜಾ ಅಮಲಲ್ಲೇ ಇದ್ದಾರೆ..
ವಿಚಿತ್ರ ಏನಂದ್ರೆ ರಾಕ್ಷಸರಂತೆ ಗೂಂಡಾವರ್ತನೆ ಮಾಡಿದ್ದು ಈ ಕಿಡಿಗೇಡಿಗಳು.. ಹೆಣ್ಮಗಳು ಅಂತಾನು ನೋಡ್ದೆ ನಾಯಿಗಳಂತೆ ಎರಗಿದ್ದು ಇವ್ರೆ.. ಪಾಪಾ ಒಂಟಿ ಮಹಿಳೆಯ ರಕ್ಷಣೆಗೆ ಬಂದವ್ರ ಮೇಲೆಯೇ ಈ ಪುಂಡರು ದೂರು ನೀಡಿದ್ದಾರೆ.. ನಮ್ಮ ಮೇಲೆ ಇವ್ರೇ ದಾಳಿ ಮಾಡಿ ಹೊಡೆದಿದ್ದು ಅಂತಾ .. ಇದ್ರ ಮೇರೆಗೆ ಪೊಲೀಸ್ರೂ ಕೂಡ ಎಫ್ಐಆರ್ ದಾಖಲಿಸಿದ್ದಾರೆ.. ಆದ್ರೆ ವಿಡಿಯೋ ಸಮೇತ ಎಲ್ಲಾ ದೃಶ್ಯಗಳು ಕಣ್ಮುಂದೆ ಇರ್ಬೇಕಾದ್ರೆ ಸತ್ಯಾಸತ್ಯತೆ ಗೊತ್ತಾಗಲ್ವಾ.. ಪೊಲೀಸ್ರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.. ಹೀಗಾಗಿ ಪೊಲೀಸ್ರು ಆರೋಪಿ ಜಾನ್ ರಿಚರ್ಡ್ ನ ಬಂಧಿಸಿದ್ದಾರೆ..
ಒಟ್ನಲ್ಲಿ ಮೈಬಗ್ಗಿಸಿ ದುಡಿದು ಬದುಕೋ ವಯಸ್ಸಲ್ಲಿ ಇಂಥಾ ನೀಚ, ಕೆಟ್ಟ ಚಟಗಳಿಗೆ ಬಲಿಯಾಗಿ.. ಜನ್ರಿಗೆ ಮಾರಕ ಆಗಿರೋರಿಗೆ ತಕ್ಷ ಶಿಕ್ಷೆ ಆಗ್ಬೇಕಿ. ಒಂಟಿ ಹೆಣ್ಮಗಳಿಗೆ ರಕ್ಷಣೆ ನೀಡ್ಬೇಕಿದೆ..

