ಬೆಂಗಳೂರು : ಜಾತಿಗಣತಿ ಸಮೀಕ್ಷೆಯಲ್ಲಿ ರಾಜ್ಯದ ಜನರು ಭಾಗವಹಿಸಲು ಒತ್ತಾಯ ಇಲ್ಲ. ಸಮೀಕ್ಷೆಯಲ್ಲಿ ಭಾಗವಹಿಸುವುದು ಕುಟುಂಬ ಮತ್ತು ಜನರ ಸ್ವಇಚ್ಛೆಗೆ ಬಿಟ್ಟಿದ್ದು ಎಂದು ಸರಕಾರ ಸ್ಪಷ್ಟಪಡಿಸಿದೆ.
ಒತ್ತಾಯವಾಗಿ ಸಮೀಕ್ಷೆಗೆ ಮಾಹಿತಿ ನೀಡಬೇಕು ಎಂದೇನಿಲ್ಲ. ಸಾರ್ವಜನಿಕರು ಸಮೀಕ್ಷೆಗೆ ಮಾಹಿತಿಯನ್ನ ಸ್ವಇಚ್ಛೆಯಿಂದ ನೀಡಬಹುದು ಅಥವಾ ನೀಡದೇನು ಇರಬಹುದು ಎಂದು ಆಯೋಗ ತಿಳಿಸಿದೆ.
ಜಾತಿಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಆ್ಯಪ್, ಸರ್ವರ್ ಸಮಸ್ಯೆ ಇದ್ದು, ಸರಿಯಾಗಿ ಸರ್ವೆ ನಡೆಸಲು ಆಗುತ್ತಿಲ್ಲ ಎಂದು ದೂರಿದ್ದಾರೆ.
ಶಿಕ್ಷಕರಿಗೆ 5,000 ಗೌರವ ಧನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಬರದಿಂದ ಸಾಗಿದೆ. ಹೀಗೆ ಜಾತಿಗಣತಿ ಸಮೀಕ್ಷೆ ಕೈಗೊಳ್ಳುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ಕೊಟ್ಟಿದ್ದು, ಗೌರವಧನವನ್ನು ಬಿಡುಗಡೆ ಮಾಡಿ ಆದೇಶಿಸಿದೆ.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ 1,20,728 ಸಮೀಕ್ಷಾದಾರರಿಗೆ(GBA ಹೊರತುಪಡಿಸಿ) ಮೊದಲನೇ ಕಂತಿನಲ್ಲಿ ಗೌರವಧನ ತಲಾ ರೂ.5000/- ಗಳಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ.60,36,40,000 ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ.
ಈ ಅನುದಾನವನ್ನು ಸಮೀಕ್ಷಾದಾರರಿಗೆ ತಲಾ ರೂ.5,000 ರಂತೆ ಮೊದಲನೇ ಕಂತಿನ ಗೌರವಧನ ನೀಡಲು ಬಳಕೆ ಮಾಡುವುದು. ಉಳಿದ ಅನುದಾನವನ್ನು ಮುಂದಿನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.

