ಬೆಂಕಿ ಅವಘಡದಿಂದ ಪಾರಾದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್
ಪಾಲಕ್ಕಾಡ್ : ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಬೆಂಕಿ ಅವಘಡದಿಂದ ಪಾರಾಗಿದ್ದಾರೆ.ಪಾಲಕ್ಕಾಡ್ನಲ್ಲಿ ನಡೆದ ಶಬರಿ ಆಶ್ರಮದ ‘ಶತಾಬ್ದಿ’ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದೀಪ ಬೆಳಗಿಸುವಾಗ ರಾಜ್ಯಪಾಲರು ಧರಿಸಿದ್ದ ಶಾಲಿಗೆ ಬೆಂಕಿ ಹೊತ್ತಿಕೊಂಡಿದೆ.ತಕ್ಷಣ ಆ ಬೆಂಕಿಯನ್ನು ಆರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಲು ರಾಜ್ಯಪಾಲರು ಬಾಗುತ್ತಿದ್ದಂತೆ ಅವರ ಶಾಲಿನ ತುದಿಗೆ ಬೆಂಕಿ ಹೊತ್ತಿಕೊಂಡಿತು ಎಂದು ಮೂಲಗಳು ತಿಳಿಸಿವೆ. “ಸ್ಥಳದಲ್ಲೇ ಅದನ್ನು ಕೂಡಲೇ ನಂದಿಸಲಾಯಿತು. ಆದರೆ ಯಾರಿಗೂ ಗಾಯಗಳಾಗಿಲ್ಲ” ಎಂದು ಮೂಲಗಳು ತಿಳಿಸಿವೆ.
Copy and paste this URL into your WordPress site to embed
Copy and paste this code into your site to embed