ಪಾಲಕ್ಕಾಡ್ : ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಬೆಂಕಿ ಅವಘಡದಿಂದ ಪಾರಾಗಿದ್ದಾರೆ.
ಪಾಲಕ್ಕಾಡ್ನಲ್ಲಿ ನಡೆದ ಶಬರಿ ಆಶ್ರಮದ ‘ಶತಾಬ್ದಿ’ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದೀಪ ಬೆಳಗಿಸುವಾಗ ರಾಜ್ಯಪಾಲರು ಧರಿಸಿದ್ದ ಶಾಲಿಗೆ ಬೆಂಕಿ ಹೊತ್ತಿಕೊಂಡಿದೆ.ತಕ್ಷಣ ಆ ಬೆಂಕಿಯನ್ನು ಆರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಲು ರಾಜ್ಯಪಾಲರು ಬಾಗುತ್ತಿದ್ದಂತೆ ಅವರ ಶಾಲಿನ ತುದಿಗೆ ಬೆಂಕಿ ಹೊತ್ತಿಕೊಂಡಿತು ಎಂದು ಮೂಲಗಳು ತಿಳಿಸಿವೆ. “ಸ್ಥಳದಲ್ಲೇ ಅದನ್ನು ಕೂಡಲೇ ನಂದಿಸಲಾಯಿತು. ಆದರೆ ಯಾರಿಗೂ ಗಾಯಗಳಾಗಿಲ್ಲ” ಎಂದು ಮೂಲಗಳು ತಿಳಿಸಿವೆ.

