ಹುಳಿಯಾರು : ತೀವ್ರ ಹೊಟ್ಟೆ ನೋವು ತಾಳಲಾರದೆ ಕಾಳಿನ ಮಾತ್ರೆ ಸೇವಿಸಿ ಪದವಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಯಾರು ಹೋಬಳಿಯ ಕಲ್ಲೇನಹಳ್ಳಿಯಲ್ಲಿ ನಡೆದಿದೆ ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಭವ್ಯ (26)ಎಂದು ಗುರುತಿಸಲಾಗಿದೆ,,
ಈಕೆ ಚಿಕ್ಕನಾಯಕನಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ತೃತೀಯ ಬಿಎ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ ಈಕೆಗೆ ಆಗಾಗ ತೀವ್ರ ಹೊಟ್ಟೆ ನೋವು ಬರುತ್ತಿದ್ದು ನೋವು ತಾಳಲಾರದೆ ತನ್ನ ಮನೆಯಲ್ಲಿದ್ದ ಕಾಳಿನ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,,
ವಿಷಯ ತಿಳಿದ ಪೋಷಕರು ತಕ್ಷಣ ಚಿಕ್ಕನಾಯಕನಹಳ್ಳಿ, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯುವಾಗ ಮಾರ್ಗಮತಿ ಇವತೆ ಕೊನೆಯುಸಿರೆಳೆದಿದ್ದಾಳೆ, ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ : ನರಸಿಂಹರಾಜು