ಹೆಬ್ಬೂರು : ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದಿವ್ಯ ಆರ್ ಪ್ರದೀಪ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ,, ನೂತನ ಅಧ್ಯಕ್ಷ ಆರ್ ಪ್ರದೀಪ್ ಅವರು ಮಾತನಾಡಿ ಅವಿರೋಧ ಆಯ್ಕೆಗೆ ಸಹಕರಿಸಿದ ನನ್ನ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ, ಪಕ್ಷಾತೀತ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು,,
ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ದಿವ್ಯ ಆರ್ ಪ್ರದೀಪ್ ಅವರಿಗೆ ಅಭಿನಂದಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಶಾಸಕರಾದ ಬಿ ಸುರೇಶ್ ಗೌಡ ರವರು, ನಾಗರಿಕರಿಗೆ ಅನುಕೂಲವಾಗುವ ರೀತಿ ಕೆಲಸ ಕಾರ್ಯಗಳಲ್ಲಿ ತೊಡಗಬೇಕು, ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ,ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು, ಅಭಿವೃದ್ಧಿ ವಿಚಾರಗಳಿಗೆ ರಾಜಕೀಯವನ್ನು ಬೆರಸಬಾರದು ಎಂದು ಸಲಹೆ ನೀಡಿದರು,,
ಇದೇ ಸಂದರ್ಭದಲ್ಲಿ ಶಾಸಕ ಬಿ ಸುರೇಶ್ ಗೌಡ, ಉಪಾಧ್ಯಕ್ಷರಾದ ಎಚ್ಎನ್ ಬಾಬು, ಮಾಸ್ತಿ ಗೌಡ್ರು, ತಿಮ್ಮೇಗೌಡ,ಎಪಿಎಂಸಿ ಕುಮಾರಣ್ಣ, ಕಾಂತರಾಜ್, ಶಿವಣ್ಣ, ಶಿವಶಂಕರಪ್ಪ, ಹರೀಶ ಕೃಷ್ಣಪ್ಪ,ಮಂಜುಳಾ,ನರಸಯ್ಯ, ಲಕ್ಷ್ಮೀದೇವಮ್ಮ,ಚೈತ್ರ, ಮಂಜುನಾಥ್, ಅಧ್ಯಕ್ಷ ಪ್ರದೀಪ್ ಹಾಗೂ ಉಪಸ್ಥಿತರಿದ್ದರು,,
ವರದಿ : ನರಸಿಂಹರಾಜು ತುಮಕೂರು

