ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡಿ ಹೆದರಿಸಲು ಹೋಗಿ ಜಿಮ್ ಟ್ರೈನರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ನಡೆದಿದೆ.
ಅಮಿತ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ಜಿಮ್ ಟ್ರೈನರ್. ಬಿಹಾರ ಮೂಲದ ಅಮಿತ ಕುಮಾರ್ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಹಾಸನದ ಮೂಲದ ಯುವತಿಯನ್ನ ಮದುವೆಯಾಗಿದ್ದ. ಆದರೆ ಮದುವೆ ಅದ ಮೂರು ತಿಂಗಳ ಬಳಿಕ ಇಬ್ಬರ ನಡುವೆ ಜಗಳವಾಗಿದೆ. ಈ ಹಿನ್ನೆಲೆ ಪತ್ನಿ ಮನೆ ಬಿಟ್ಟು ಉರೊಗೆ ಹೋಗಿದ್ದಾಳೆ. ಇದನ್ನೂ ಓದಿ: ಹಸುಗೂಸನ್ನು ರಸ್ತೆ ಬದಿಗೆ ಎಸೆದ ಅನಾಮಿಕರು
ಈ ವೇಳೆ ವಿಡಿಯೋ ಕಾಲ್ ಮಾಡಿ ಪತ್ನಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವಿಡಿಯೋ ಕಾಲ್ ಮೂಲಕ ಬೆದರಿಕೆ ಆತ್ಮಹತ್ಯೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ವಿಡಿಯೋ ಕಾಲ್ ಮಾಡಿ ಹಗ್ಗ ಹಾಕಿಕೊಂಡಿರುವದನ್ನು ತೋಋಿಸುವ ವೇಳೆ ಮೊಬೈಲ್ ಕೆಳಗೆ ಜಾರಿ ಬಿದಿದ್ದೆ. ಮೋಬೈಲ್ ಜಾರಿ ಪರಿಣಾಮ ಅಮಿತ್ ಕುಮಾರ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: ರೇವಣ್ಣ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ

ಅಮಿತ್ ಕುಮಾರ್ ಪತ್ನಿ ಜಿಮ್ ಪಕ್ಕವೇ ಮನೆ ಮಾಡಿಕೊಂಡಿದ್ದಳು. ಈ ನಡುವೆ ಇಬ್ಬರಿಗೂ ಪರಿಚಯವಾಗಿ ಮದುವೆಯಾಗಿದ್ದರು. ಬಳಿಕ ಮದುವೆ ಮಾಡಿಕೊಂಡ ಮೂರು ತಿಂಗಳಿಗೆ ಇಬ್ಬರ ನಡುವೆ ಜಗಳೂ ಶುರುವಾಗಿದ್ದವು. ಸ್ನೇಹಿತರ ಮೊಬೈಲ್ ಎಂದು ಯುವತಿ ಪತಿಯನ್ನ ನಿರ್ಲಕ್ಷ್ಯ ಮಾಡುತ್ತಿದ್ದಳು. ಇದೇ ವಿಚಾರವಾಗಿ ಆಕೆ ಒಮ್ಮೆ ಮನೆ ಬಿಟ್ಟು ಹೋಗಿದ್ದಳು. ಕಳೆದ ವಾರವಷ್ಟೇ ವಾಪಸ್ಸ್ ಆಗಿದ್ದಳು. ಇದನ್ನೂ ಓದಿ: A2 ಆರೋಪಿ ರೇವಣ್ಣ ಬಂಧನ ಅನುಮಾನಾಸ್ಪದಾ
ಇತ್ತಿಚೆಗೆ ಅನಿಲ್ ಕುಮಾರ್ ಮತ್ತೆ ಅದೇ ವಿಚಾರವಾಗಿ ಜಗಳ ತೆಗೆದಿದ್ದ. ಇದರ ಬೆನ್ನಲ್ಲೇ ಪತ್ನಿ ಮತ್ತೆ ಮನೆ ಬಿಟ್ಟು ಹೋಗಿದ್ದಳು. ಅದಕ್ಕಾಗಿ ಅಮಿತ್ ಪದೇ ಪದೇ ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ಮನವಿ ಮಾಡುತ್ತಿದ್ದ. ವಿಡಿಯೋ ಕಾಲ್ ಮಾಡಿ ಮನೆಗೆ ವಾಪಸ್ ಬಾ, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳೂವುದಾಗಿ ಬೆದರಿಕೆ ಹಾಕಲು ನೇಣಿಗೆ ಹಾಕಿಕೊಂಡಿದ್ದಾನೆ ಆಗ ಮೊಬೈಲ್ ಕೆಳಗೆ ಬಿದ್ದಿದೆ. ಮೊಬೈಲ್ ಕೆಳಗೆ ಬಿದ್ದ ಪರಿಣಾಮ ಅಮಿತ್ ವಿಡಿಯೋ ಕಾಲ್‌ನಲ್ಲಿಯೇ ಅಮಿತ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ದಿನೇ ದಿನೇ ಹೆಚ್ಚಾಗುತಿದೆ ಡೆಂಗ್ಯೂ ಪ್ರಕರಣಗಳು

ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ರವಾನಿಸಲಾಗಿದೆ. ಇದನ್ನೂ ಓದಿ: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರಿ ಅಂದರ್