1.ಟೋಲ್ ದರ ಹೆಚ್ಚಳದ ಬಗ್ಗೆ ಭಾರೀ ವಿರೋಧ
ಕೇಂದ್ರ ಸರ್ಕಾರವು ಹೈವೇಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಗುಡ್‌ನ್ಯೂಸ್ ಕೊಡುವುದಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಟೋಲ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಟೋಲ್ ದರ ಹೆಚ್ಚಳದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಕೆಲವು ನಿರ್ದಿಷ್ಟ ಟೋಲ್‌ಗಳ ಬೆಲೆಯನ್ನು ಇಳಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ.
2.ತಮಿಳುನಾಡಿನಲ್ಲಿ ಜಲ್ಲಿಕಟ್ಟುಗೆ ಚಾಲನೆ
ತಮಿಳುನಾಡಿನ ಮಧುರೈನಲ್ಲಿ ನಡೆಯುವ ವಿಶ್ವಪ್ರಸಿದ್ಧ ಮೂರು ದಿನಗಳ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ದೊರಕಿದ್ದು ಅವನಿಯಪುರಂ ಗ್ರಾಮದಲ್ಲಿ ಮೊದಲ ದಿನದ ಸ್ಪರ್ಧೆಯಲ್ಲಿ 1,100 ಎತ್ತುಗಳು ಭಾಗವಹಿಸಿವೆ.ಅತ್ಯುತ್ತಮ ಹೋರಿಗೆ 11 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಮತ್ತು ಅತ್ಯುತ್ತಮ ಹೋರಿ ಪಳಗಿಸುವವರಿಗೆ 8 ಲಕ್ಷ ರೂ. ಮೌಲ್ಯದ ಕಾರು ಹಾಗೂ ಇತರ ಬಹುಮಾನಗಳ ಸುರಿಮಳೆ
3.ಲಕ್ಷ್ಮೀ ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲಿ : ಸಿ.ಟಿ.ರವಿ ಹಾರೈಕೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಮುಗಿಸಿ, ಬೆಳಗಾವಿಗೆ ಹೊರಟಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು, ಕಿತ್ತೂರು ಹೊರಭಾಗದಲ್ಲಿ ಅಪಘಾತಕ್ಕೀಡಾಗಿತ್ತು. ಇನ್ನೇನು, 15 ನಿಮಿಷದಲ್ಲಿ ಬೆಳಗಾವಿಗೆ ತಲುಪಬೇಕು ಎನ್ನುವಷ್ಟರಲ್ಲಿ ಈ ಅಪಘಾತ ಸಂಭವಿಸಿದೆ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟ್ವೀಟ್ ಮಾಡಿ ಹಾರೈಸಿದ್ದಾರೆ.
4.ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಆರಂಭ
ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮುಹೋತ್ಸವ ಇಂದಿನಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯಲಿರುವ ಅಜ್ಜನ ಜಾತ್ರೆ ಕಣ್ತುಂಬಿಕೊಳ್ಳಲು, ಲಕ್ಷಾಂತರ ಭಕ್ತರು ಕಾಯುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಸಾವಿರಾರು ಭಕ್ತರು ಜಾತ್ರೆಗಾಗಿ ಆಗಮಿಸಿದ್ದು, ಸಂಜೆಯ ವೇಳೆಗೆ ಮೂರು ಪಟ್ಟು ಭಕ್ತರು ಹೆಚ್ಚಾಗುವ ಸಾಧ್ಯತೆ ಇದೆ.ಈ ಬಾರಿ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸಕ್ಕೆ ಧಾರವಾಡದ ಪ್ರಸಿದ್ಧ ಹಿಂದುಸ್ತಾನಿ ಗಾಯಕ, ಪಂಡಿತ ಪದ್ಮಶ್ರೀ ಎಂ.ವೆಂಕಟೇಶ ಕುಮಾರ್ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷದಂತೆ ಗವಿಸಿದ್ದೇಶ್ವರನಿಗಾಗಿ ಈ ವರ್ಷವೂ ಮಹಾ ಪ್ರಸಾದದ ವ್ಯವಸ್ಥೆ ಆಗಿದ್ದು, 200ರಿಂದ 300 ಕ್ವಿಂಟಲ್ ಮಾದಲಿ, 50 ಕ್ವಿಂಟಲ್ ಶೇಂಗಾ ಹೋಳಿಗೆ, ಉಪ್ಪಿನಕಾಯಿ, ಸಜ್ಜೆ, ರಾಗಿ, ಜೋಳದ ರೊಟ್ಟಿಯನ್ನು ಭಕ್ತರು ಅರ್ಪಿಸಿದ್ದಾರೆ.
5.ಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಅಯ್ಯಪ್ಪ :
ಸಂಕ್ರಾಂತಿಯಂದು ಜ್ಯೋತಿ ರೂಪದಲ್ಲಿ ಅಯ್ಯಪ್ಪ ಭಕ್ತರಿಗೆ ದರ್ಶನ ನೀಡಿದ್ದಾನೆ.ಸಂಜೆ 6:44ಕ್ಕೆ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು. ಈ ವೇಳೆ ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಲಕ್ಷಾಂತರ ಭಕ್ತರು ಮಕರ ಜ್ಯೋತಿ ದರ್ಶನ ಪಡೆದರು.ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ಮಹಾಮಂಗಳಾರತಿ ವೇಳೆಗೆ ಜ್ಯೋತಿರೂಪದಲ್ಲಿ ಅಯ್ಯಪ್ಪ ಭಕ್ತರಿಗೆ ದರ್ಶನ ಕೊಟ್ಟಿದ್ದಾನೆ.
6.ಖಾಸಿಗಿ ಬಸ್ ಮತ್ತು ಕೆ.ಎಸ್.ಆರ್.ಟಿ. ಸಿ ಮುಖಾ ಮುಖಿ ಮುಖಿ ಡಿಕ್ಕಿ
ಮುಳಬಾಗಿಲು ನಿಂದ ಅಲಂಗೂರುಗೆ ಹೋಗುತ್ತಿದ್ದ ksrtc ಬಸ್ ಮುಂಜಾನೆ ಸುಮಾರು 8 ಗಂಟೆಗೆ ಯ ಸುಮಾರಿಗೆ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ.ವಿಷಯ ತಿಳಿದ ಕೂಡಲೇ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ . ಇನ್ನು ಈ ಸರ್ಕಲ್ ನಲ್ಲಿ ಹೆಚ್ಚಾಗಿ ಅಪಘಾತಗಳು ಆಗತಿದ್ದು ಅದೆಷ್ಟು ಬೇಗ ಸೂಕ್ತವಾದ ಕ್ರಮ ಕೈಗೊಂಡು ಸಿಗ್ನಲ್ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
7.ಜೈಲಿನಿಂದ ಬಿಡುಗಡೆ ಬಳಿಕ ದರ್ಶನ್ ಮೊದಲ ಮಾತು :
ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.ಮೈಸೂರಿನಲ್ಲಿ ತೋಟದ ಮನೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸಂಕ್ರಾಂತಿ ಆಚರಿಸಿದ್ದಾರೆ. ತಮ್ಮ ಪ್ರೀತಿಯ ಕುದುರೆಯನ್ನು ಹಿಡಿದುಕೊಂಡಿರುವ ಫೋಟೋವನ್ನು ದರ್ಶನ್ ಅಪ್ಲೋಡ್ ಮಾಡಿದ್ದಾರೆ. ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ.
8.ಗವಿಗಂಗಾಧರೇಶ್ವರನ ಸೂರ್ಯಾಭಿಷೇಕಕ್ಕೆ ಅಡ್ಡಿಯಾದ ಮೋಡ
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ದಿನ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ವಿಶೇಷ ವಿಸ್ಮಯಕ್ಕೆ ಮೋಡ ಅಡ್ಡಿ ಪಡಿಸಿದ್ದಾನೆ. ಸಂಜೆ 5:14 ರಿಂದ 5:17ರ ವರೆಗೆ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. ಆದರೆ ಮೋಡ ಕವಿದ ವಾತಾವರಣದಿಂದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಸಾಧ್ಯವಾಗಲಿಲ್ಲ.
9.ಉಮ್ರ ಯಾತ್ರೆಗೆ ಹೊರಟ ಸದಸ್ಯರುಗಳು :
ಕೆರೂರ ಪಟ್ಟಣದ ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಸೈದುಸಾಬ್ ಚೌಧರಿ ಅವರು ಮತ್ತು ಕೆರೂರಿನ ಮುಸ್ಲಿಂ ಬಾಂಧವರು ಉಮ್ರ ಯಾತ್ರೆಗೆ ಹೊರಡುತ್ತಿದ್ದು ಅವರಿಗೆ ಪ್ರಯಾಣ ಸುಖಮಯವಾಗಲೆಂದು ಬಾದಾಮಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಭೀಮಸೇನ ಬಿ ಚಿಮ್ಮನಕಟ್ಟಿ ಅವರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಡಾ ಎಂ ಜಿ ಕಿತ್ತಲಿ, ಪ ಪಂ ಮಾಜಿ ಅಧ್ಯಕ್ಷರಾದ ಬಿ.ಬಿ.ಸೂಳಿಕೇರಿ, ಪಟ್ಟಣ ಪಂಚಾಯತಿ ಸದಸ್ಯರು ಚೌಧರಿ ಭಾಗವಾನ್ ಜಮಾತದ ಗುರುಹಿರಿಯರು ಇತರರು ಹಾಜರಿದ್ದರು.
10.ಗುದ್ದಲಿ ಪೂಜಾ ಕಾರ್ಯಕ್ರಮ ನೆರವೇರಿಸಿದ ಶಾಸಕರು
ಬಾದಾಮಿಯ ಶಾಸಕರದಂತಹ ಸನ್ಮಾನ್ಯ ಶ್ರೀ ಭೀಮಸೇನ ಬಿ ಚಿಮ್ಮನಕಟ್ಟಿ ಅವರು ತಾಲೂಕಿನ ಸುಪ್ರಸಿದ್ದ ಆಡಗಲ್ಲ ಗ್ರಾಮಕ್ಕೆ ಹೊಂದಿಕೊಂಡಿರುವ ಕೋನಮ್ಮದೇವಿ ದೇವಸ್ಥಾನದಲ್ಲಿ ಗೋಪುರದ ಅಡಿಗಲ್ಲು ಸಮಾರಂಭದಲ್ಲಿ ಭಾಗಿಯಾಗಿ ಗುದ್ದಲಿ ಪೂಜಾ ಕಾರ್ಯಕ್ರಮ ನಡೆ ಸಿಕೊಟ್ಟರು . ಇನ್ನ ಈ ಕಾರ್ಯಕ್ರಮದಲ್ಲಿ ಊರಿನ ಗುರುಹಿರಿಯರು ಹಾಗೂ ಕಾರ್ಯಕರ್ತರು ಆದ ಕೋನಪ್ಪ ಕಾಟನ್ನವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಗಚ್ಚಪ್ಪ ಹಾಗೂ ಕಾಂಗ್ರೆಸ್ ಯುವ ಮುಖಂಡರು ಮಹೇಶ್ ಹೊಸಗೌಡರ ಇನ್ನುಳಿದ ಮುಖಂಡರ ಸಮ್ಮುಖದಲ್ಲಿ ಭಾಗಿಯಾಗಿದ್ದರು.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

