ಹರ್ಯಾಣ : ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭರ್ಜರಿ ಗೆಲುವು ದಾಖಲಿಸಿದ ಬಿಜೆಪಿಯಲ್ಲಿ ಸಿಎಂ ಯಾರಾಗುತ್ತಾರೆ ಎಂಬುದು ಬಹುತೇಕ ನಿರ್ಧಾರವಾಗಿದೆ. ನಾಯಬ್ ಸಿಂಗ್ ಹಯಾರ್ಣದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬಧೋಲಿ ಮತ್ತು ನಾಯಬ್ ಸೈನಿ ಇಂದು ದೆಹಲಿಗೆ ತೆರಳುತ್ತಿದ್ದು, ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 12 ವಿಜಯದಶಮಿಯಂದು ನಾಯಬ್ ಸೈನಿ ಹಯಾರ್ಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ ನೈಬ್ ಸೈನಿ ಜೊತೆಗೆ ಒಬ್ಬ ಅಥವಾ ಇಬ್ಬರು ಉಪಮುಖ್ಯಮಂತ್ರಿಗಳೂ ಇರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ಬಿಜೆಪಿಯ ಕೇಂದ್ರ ನಾಯಕತ್ವವು ಶಾಸಕರೊಂದಿಗೆ ಸಭೆ ನಡೆಸಲು ಹರ್ಯಾಣಕ್ಕೆ ವೀಕ್ಷಕರನ್ನು ಕಳುಹಿಸುತ್ತದೆ, ಇದರಿಂದಾಗಿ ಪಕ್ಷವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೆಗೆ ಸರಿಯಾದ ಅಭ್ಯರ್ಥಿಯನ್ನು ಅಧಿಕೃತವಾಗಿ ಆಯ್ಕೆ ಮಾಡುತ್ತದೆ. ಅದರೊಂದಿಗೆ ಸಂಪುಟ ಸಚಿವರ ಪಟ್ಟಿಯನ್ನು ತಯಾರಿಸಲಾಗುವುದು.