ಹಾಸನ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಂಸದ ಪ್ರಜ್ವಲ್ ಅವರನ್ನು ನೆನೆದು ತಂದೆ ರೇವಣ್ಣ ಅನುಕಂಪ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿನಡೆದ ಜಾ.ದಳ ಕಾರ್ಯಕರ್ತರ ಸಭೆಯಲ್ಲಿ ರೇವಣ್ಣ ತಮ್ಮ ಮಗನ ಬಗ್ಗೆ ಅನುಕಂಪದ ಮಾತುಗಳನ್ನಾಡಿದ್ದಾರೆ. ಹಾಗೇ ಪ್ರತಿಕಾರದ ಮಾತುಗಳನ್ನೂ ಆಡಿದ್ದಾರೆ.
ಶಾಸಕ ರೇವಣ್ಣನವರು ಇಂದು (ಸೆ.20) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿಮಗ ಪ್ರಜ್ವಲ್ ಅವರನ್ನು ನೆನಪಿಸಿಕೊಂಡು ಪ್ರಜ್ವಲ್ಗೆ ಏನು ಗೊ ತ್ತಾಗಲ್ಲ, ಪಾಪ ಅವನು ಒಳ್ಳೆ ಹುಡುಗ ಎಂದು ಹೇಳಿದ್ದಾರೆ.ನಂತರ ಸಭೆಯಲ್ಲಪಾಲ್ಗೊಂ ಡಿದ್ದಕಾರ್ಯಕರ್ತರಿಗೆ ಮುಂದಿನ ಮೂರು ವರ್ಷಗಳ ಕಾಲ ಸಮ್ಮನೆ ಇದ್ದುಬಿಡಿ, ನನ್ನ ಕುಟುಂಬಕ್ಕೆ ಆದ ಅವಮಾನವನ್ನು ಬಡ್ಡಿಸಮೇತ ತೀರಿಸದಿದ್ದರೆ ನಾನು ಮಾಜಿ ಪ್ರಧಾನಿ ದೇವೇಗೌಡ ಅವರೇ ಮಗನೇ ಅಲ್ಲ ಎಂದು ಪ್ರತೀಕಾರದ ಮಾತುಗಳನ್ನು ನುಡಿದ್ದಾರೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣಲೈಂಗಿಕ ಕಿರುಕುಳ ಹಾಗೂ ಆತ್ಯಾಚಾರ ಪ್ರಕರಣದ ಅಡಿಯಲ್ಲಿಕೆಲವು ತಿಂಗಳುಗಳಿಂದ ಜೈಲು ಪಾಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದದವರು ನನ್ನ ಕೈಗೆ ಸಿಗದೇ ಎಲ್ಲಿಹೋ ಗುತ್ತಾರೆ ಎಂದು ಕಿಡಿಕಾರಿದ್ದಾರೆ. ಇಂದು ಜಿಲ್ಲೆಯಲ್ಲಿಜಾ.ದಳ ಪಕ್ಷದಲ್ಲಿದೇವೇಗೌಡರು, ಕುಮಾರಣ್ಣಹಾಗೂ ನಾನು ಉಳಿದಿರುವುದು ನಿಮ್ಮಂತಹ ಪುಣ್ಯಾತ್ಮರಿಂದಲೇ ಎಂದು ತಿಳಿಸಿದ್ದಾರೆ
ಅಲ್ಪಸಂಖ್ಯಾತರಿಂದಾಗಿ ಸೋಲು :
ಹಾಸನದಲ್ಲಿ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಅವರನ್ನು ನಾಲ್ಕು ಬಾರಿ ಜನ ಗೆಲ್ಲಿಸಿದ್ದಾರೆ. ಆದರೆ, 2013ರಲ್ಲಿ ಅಲ್ಪಸಂಖ್ಯಾತರಿಂದ ಹೆಚ್ಎಸ್ ಪ್ರಕಾಶ್ ಸೋತರು. 2023ರ ಚುನಾವಣೆಯಲ್ಲಿ ಹಾಸನದಲ್ಲಿ 50 ಸಾವಿರ ಓಟಿಗೆ ಒಂದು ಓಟು ಕಡಿಮೆಯಾದರೆ ರಾಜೀನಾಮೆ ಕೊಡುತ್ತೇನೆ ಅಂಥ ಸವಾಲು ಇತ್ತು.
ಹೀಗಾಗಿ, ನಾನೇ (ಹೆಚ್ಡಿ ರೇವಣ್ಣ) ಹಾಸನ ಕ್ಷೇತ್ರದಿಂದ ನಿಲ್ಲಬೇಕು ಎಂದು ಒತ್ತಾಯ ಬಂತು. ಕೊನೆಗೆ ಸ್ವರೂಪ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಲಾಯ್ತು. ಈ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು ಎಂದು ಹೇಳಿದರು.