ಬೆಳಗಾವಿ : ಆರೋಗ್ಯ ಸಚಿವರೇ ನೀವು ನೋಡಲೇಬೇಕಾದ ಸ್ಟೋರಿ ಇದು. ಡ್ಯೂಟಿಗೆ ಚಕ್ಕರ್, ಮೋಜು ಮಸ್ತಿಗೆ ಹಾಜರ್. ಕರ್ತವ್ಯ ಲೋಪ ಎಸಗಿದ ಮುಗಳಖೋಡ ಆರೋಗ್ಯ ಕೇಂದ್ರದ ಸಿಬ್ಬಂದಿಗಳು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟನ ಕರ್ತವ್ಯದಲ್ಲಿರುವಾಗಲೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಬ್ಬಂದಿ. ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಂದ ಎಡವಟ್ಟು.ನಿನ್ನೆ ಮಧ್ಯಾಹ್ನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಗ್ಯ ಕೇಂದ್ರದ ಅಷ್ಟು ಸಿಬ್ಬಂದಿ.

ಸಂಜೆ 4 ಗಂಟೆಯಾದ್ರೂ ಒಬ್ಬ ಸಿಬ್ಬಂದಿನೂ ಇಲ್ಲದೇ ಖಾಲಿ ಖಾಲಿ. ಚಿಕಿತ್ಸೆಗೆಂದು ಬಂದಿದ್ದ ಸಾರ್ವಜನಿಕರಿಗೆ ಚಿಕಿತ್ಸೆ ಇಲ್ಲದೇ ವಾಪಸ್. ಸ್ಥಳೀಯರ ಕೆಂಗಣ್ಣಿಗೆ ಗುರಿಯಾದ ಆರೋಗ್ಯ ಇಲಾಖೆ ಸಿಬ್ಬಂದಿಗಳು. ಇವರಿಗೆ ಸರ್ಕಾರಿ ಕೆಲಸ ಮಾಡಲೆಂದು ಸಂಬಳ ನೀಡ್ತಾರೆ.
ಆದ್ರೆ ಇವರು ಸರ್ಕಾರಿ ಸಂಬಳ ಪಡೆದು ಮದುವೆ ಅಂತ ಮೋಜು ಮಸ್ತಿ ಮಾಡುತ್ತಾ ಅಡ್ಡಾಡುತ್ತಾರೆ. ಆರೋಗ್ಯ ಕೇಂದ್ರ ಇದು ಧರ್ಮದ ಛತ್ರ ಅಲ್ಲವೆಂದು ಸ್ಥಳೀಯರಿಂದ ಸಿಬ್ಬಂದಿಗಳಿಗೆ ತರಾಟೆ.
ವರದಿ :ಎಂ. ಕೆ. ಸಪ್ತಸಾಗರ

