ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತದ ನೌಕಾಸೇನೆ ಬ್ರಹ್ಮೋಸ್ ಕ್ಷಿಪಣಿಯನ್ನು ಯುದ್ಧನೌಕೆಯಿಂದ ಹಾರಿಸಿದೆ. ಯುದ್ಧ ನೌಕೆಯಿಂದ ಹಾರಿಸಿ Anytime, Anywhere ಎಂದು ಭಾರತೀಯ ನೌಕಾಸೇನೆ ಪೋಸ್ಟ್ ಮಾಡಿದೆ.
ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಅನೇಕ ಹಡಗು ವಿರೋಧಿ ಗುಂಡಿನ ದಾಳಿಗಳನ್ನು ನಡೆಸಿದೆ. ನೌಕಾಪಡೆಯು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಹೇಳಿದೆ.
ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಯಿಂದ ಬ್ರಹ್ಮೋಸ್ (BrahMos) ಮತ್ತು ಮೇಲ್ಮೈ ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ.
ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ. ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ಮಾಡುತ್ತಿದ್ದರೆ ಇನ್ನೊಂದು ಕಡೆ ಭಾರತ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ.

