ಇಂಫಾಲ: ಈಶಾನ್ಯ ರಾಜ್ಯದ ಮಣಿಪುರದಲ್ಲಿ (Manipura) ಸಂಸದೀಯ ಕ್ಷೇತ್ರದ ಮತಗಟ್ಟೆಗಳಲ್ಲಿ ಇಂದು ಮರು ಮತದಾನ ಆರಂಭವಾಗಿದೆ.
ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ (Lokasabha Elections) ಮೊದಲ ಹಂತದ ಮತದಾನದ ವೇಳೆ ಕಿಡೆಗೇಡಿಗಳು ಮತಗಟ್ಟೆಗಳಲ್ಲಿ ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿದ್ದಾರೆ. ನಂತರ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿತ್ತು. ಅದರಂತೆ ಇಂದು ಮತದಾನ ನಡೆಯುತ್ತಿದೆ. ಇದನ್ನೂ ಓದಿ: ಸುಧಾಕರ್, ಮಲ್ಲೇಶ್ ಬಾಬುಗೆ ಮತ ನೀಡಿ ಗೆಲ್ಲಿಸಿ: ಮೋದಿ
ಇಂದು ನಡೆತುತ್ತಿರುವ ಮರು ಮತದಾನಕ್ಕೆ ಯಾವುದೇ ಅವಘಡ ಸಂಭವಿಸಿದಂತೆ ಎಲ್ಲಾ ಮತಗಟ್ಟೆಗಲ್ಲಿ ಬಿಗೆ ಭದ್ರತೆ ಕೈಗೊಳ್ಳಲಾಗಿದೆ. ಖುರೈ ವಿಧಾನಸಭಾ ಕ್ಷೇತ್ರದಲ್ಲಿ ಮೊಯಿರಂಗ್ಯಾಂಪು ಸಾಜೆಬ್ ಅಪ್ಪರ್ ಪ್ರೈಮರಿ ಶಾಲೆ ಮತ್ತು ಎಸ್. ಇಬೋಬಿ ಪ್ರಾಥಮಿಕ ಶಾಲೆ (ಪೂರ್ವ ಭಾಗ), ಕ್ಷೇತ್ರಗಾವೊದಲ್ಲಿ ನಾಲ್ಕು, ತೊಂಗ್ಜುನಲ್ಲಿ ಒಂದು, ಉರಿಪೋಕ್‌ನಲ್ಲಿ ಮೂರು ಮತ್ತು ಕೊಂತೌಜಮ್ ಮರುಮತದಾನ ಕೇಂದ್ರಗಳಾಗಿವೆ. ಇದನ್ನೂ ಓದಿ: ಒಂದೇ ಕುಟುಂಬದ 8 ಜನರಿದ್ದ ಕಾರಿಗೆ ಬೆಂಕಿ – 7 ಜನರಿಗೆ ಗಂಭೀರ ಗಾಯ, ಹುಡುಗಿ ಸಜೀವ ದಹನ
ಸಂಘರ್ಷ ಪೀಡಿತ ಮಣಿಪುರದ ಕೆಲವು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿರುವ ಘಟನೆಗಳು ವರದಿಯಾಗಿದ್ದವು. ಈ ನಡುವೆಯೂ ಶುಕ್ರವಾರ ಸಂಜೆ 7 ಗಂಟೆಯವರೆಗೆ ಮಣಿಪುರದಲ್ಲಿ ಶೇ.69.18ರಷ್ಟು ಮತದಾನವಾಗಿತ್ತು. ಇದನ್ನೂ ಓದಿ: ಭಾರತ ವಿರೋಧಿ ಮುಯಿಝುಗೆ ಮಾಲ್ಡೀವ್ಸ್ ಚುನಾವಣೆಯಲ್ಲಿ ಭರ್ಜರಿ ಗೆಲುವು

