ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಗ ಪ್ರದರ್ಶನ ಮಾಡಲಾಯಿತು.
ಅಟಾರಿ ವಾಘಾ ಗಡಿಯಲ್ಲಿ ಯೋಗಭ್ಯಾಸ ಮಾಡಲಾಯಿತು. ರಾಜಸ್ಥಾನದ ಗಡಿ ಮತ್ತು ಸಿಯಾಚಿನ್‌ನಲ್ಲೂ ಯೋಗ ಪ್ರದರ್ಶನ ನೀಡಲಾಯಿತು. ಜೊತೆಗೆ ದೆಹಲಿಯ ಸಂಸತ್ ಭವನದ ಆವರಣದಲ್ಲಿ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ಯೋಗಾಚರಣೆ ನಡೆಯಿತು. ಇದನ್ನೂ ಓದಿ: ಗಣಿ ನಾಡಿನಲ್ಲಿ ಸಿಎಂ ಯೋಗ – ನಟಿ ಶ್ರೀಲೀಲಾ ಸಾಥ್
10ನೇ ಯೋಗ ದಿನದ ಹಿನ್ನೆಲೆಯಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ಪ್ರದರ್ಶನ ಮಾಡಲಾಯಿತು. ದಾಲ್ ಸರೋವರ ತೀರದಲ್ಲಿ ಮೋದಿ ಯೋಗಾಸನ ಮಾಡಿದರು.ಇದನ್ನೂ ಓದಿ: ಯೋಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ – ಹೆಚ್‌ಡಿಕೆ

