ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಹಾಗೂ ಶವಗಳನ್ನ ಹೂತು ಹಾಕಿರುವ ಪ್ರಕರಣ ಸಂಬಂಧ ಸರ್ಕಾರ ಎಸ್‍ಐಟಿ ರಚನೆ ಮಾಡಿಕೊಳ್ಳಲಿ, ಏನೂ ತೊಂದರೆ ಇಲ್ಲ. ಇಲ್ಲಿ ಯಾವುದೇ ತಪ್ಪಾಗಿಲ್ಲ. ಅವರು ತನಿಖೆ ಮಾಡಿಕೊಳ್ಳುವುದಾದರೆ, ಮಾಡಿಕೊಳ್ಳಲಿ,ಅದಕ್ಕೇನೂ ಸಮಸ್ಯೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಎಸ್ ಐಟಿ ರಚನೆ ಮಾಡಿಕೊಳ್ಳಲಿ. ತಪ್ಪೇ ಆಗಿಲ್ಲ ಎಂದ ಮೇಲೆ ಯಾರೊಬ್ಬರು ಹೆದರುವ ಅಗತ್ಯವೂ ಇಲ್ಲ ಎಂದು ಹೇಳಿದರು. ಇದೇ ವೇಳೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಕೂಡ ಧರ್ಮಸ್ಥಳದ ಪ್ರಕರಣದ ಬಗ್ಗೆ ಮಾತಾನಾಡಿ, ಯಾವುದೇ ರೀತಿಯಲ್ಲಿ ಧರ್ಮಸ್ಥಳ ಕೇಂದ್ರದಿಂದ ಆ ರೀತಿಯ ತಪ್ಪುಗಳು ಆಗಿಲ್ಲ ಎನ್ನುವ ವಿಶ್ವಾಸ ಇದೆ.
ಇಂಥಹ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರ ಇಟ್ಕೊಂಡು ಈ ತರದ ಚರ್ಚೆಗಳು ನಡೀತಿದೆ. ಬೇಗ ತನಿಖೆ ಮಾಡಲಿ, ವಿಚಾರ ಮತ್ತಷ್ಟು ಎಳೆದುಕೊಂಡು ಹೋಗುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಪ್ರಕರಣದ ಬಗ್ಗೆ ಎಸ್‍ಐಟಿ ರಚನೆ ಮಾಡಿದ್ದು ಒಳ್ಳೆಯದೇ, ಸ್ವತಃ ಧರ್ಮಸ್ಥಳದವರೇ ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ಸುಮ್ಮನೆ ಗೊಂದಲ ಮೂಡಿಸಿ ಆ ಕೇಂದ್ರದ ಮೇಲಿರುವ ವಿಶ್ವಾಸ ಹಾಳು ಮಾಡಿಕೊಳ್ಳುವುದು ಬೇಡ, ಬೇಗ ತನಿಖೆ ಆಗಿ ಸತ್ಯ ಗೊತ್ತಾಗಲಿ ಎಂದು ಹೇಳಿದರು.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

