ಗಾಜಾ : ಇಸ್ರೇಲ್‌ನ ರಕ್ಷಣಾ ಪಡೆಗಳು ಗಾಜಾದಿಂದ ಅಮೆರಿಕ ಪ್ರಜೆ ಸೇರಿದಂತೆ 6 ಜನರ ಶವವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದು ರಫಾ ನಗರದ ಕೆಳಗಿರುವ ಸುರಂಗದಲ್ಲಿ ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಈ ಸುರಂಗದಲ್ಲಿ ಪತ್ತೆಯಾದ ಮೃತದೇಹಗಳಲ್ಲಿ ಅಮೆರಿಕ ಪ್ರಜೆಯದ್ದೂ ಇದೆ. ಮೃತನ ಹೆಸರು ಹರ್ಷ್ ಗೋಲ್ಡ್ ಬರ್ಗ್ ಪೊಲೀನ್ ಎಂದು ಗುರುತಿಸಲಾಗಿದೆ.
ಈಡನ್ ಯೆರುಷಲ್ಮಿ(24), ಕಾರ್ಮೆಲ್ ಗ್ಯಾಟ್(39), ಅಲ್ಮೋಗ್ ಸರುಸಿ(26), ಅಲೆಕ್ಸ್ ಲುಬ್ನೋವ್(32) ಮತ್ತು ಒರಿ ಡ್ಯಾನಿನೊ (25) ಎಂಬವರ ಶವವನ್ನು ಕೂಡ ಗುರುತು ಸಮೇತ ಇಸ್ರೇಲ್ ರಕ್ಷಣಾ ಪಡೆಯವರು ಪತ್ತೆಹಚ್ಚಿದ್ದಾರೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಬಂಡುಕೋರರು ನಡೆಸಿದ ದಾಳಿಯಿಂದ 251 ಜನ ಒತ್ತೆಯಾಳುಗಳಾಗಿದ್ದರು. ಭಯೋತ್ಪಾದರು ನಡೆಸಿದ ದಾಳಿಯಲ್ಲಿ ಸಿಕ್ಕಿಕೊಂಡ ಈತ ಎಪ್ರಿಲ್ 24 ರಂದು ಹಮಾಸ್ ಬಂಡುಕೋರರಿಂದ ಬಿಡುಗಡೆಯಾದ ಪ್ರೂಪ್- ಆಫ್ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದರು.

