ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ 101ನೇ ಭೂ ವೀಕ್ಷಣಾ ಉಪಗ್ರಹ EOS-09 ಉಡಾವಣೆ ಯಶಸ್ವಿಯಾಯಿತು. ಆದರೆ EOS-09 ಉಪಗ್ರಹ ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಂಸ್ಥೆ ನಡೆಸಿದ ಪ್ರಯತ್ನವು ವಿಫಲವಾಗಿದೆ ಎಂದು ಈ ಬಗ್ಗೆ ಇಸ್ರೋ ಅಧಿಕೃತವಾಗಿ ಮಾಹಿತಿ ನೀಡಿದೆ. ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಅವರು, EOS-09 ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ 5.59ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ61 ಮೂಲಕ EOS-09 ಉಪಗ್ರಹ ಉಡಾವಣೆಯನ್ನು ಪ್ರಯತ್ನಿಸಲಾಯಿತು. ಆದರೆ ಪಿಎಸ್‌ಎಲ್‌ವಿ-ಸಿ61 ಕಾರ್ಯಕ್ಷಮತೆ 2ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3ನೇ ಹಂತದಲ್ಲಿ ವೀಕ್ಷಣೆಯಿಂದಾಗಿ ಕಾರ್ಯಾಚರಣೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಪಿಎಸ್‌ಎಲ್‌ವಿ-ಸಿ61 ಮೂಲಕ ಭೂ ವೀಕ್ಷಣಾ EOS-09 ಉಪಗ್ರಹ ಉಡಾವಣೆ ಮಾಡುವ ಪ್ರಯತ್ನ ಫಲ ಕೊಡಲಿಲ್ಲ ಎಂದು ಹೇಳಲಾಗಿದೆ.
ಮೂರನೇ ಹಂತದ ಕಾರ್ಯನಿರ್ವಹಣೆಯ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಈ ಕುರಿತು ವಿಶ್ಲೇಷಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಪೋಸ್ಟ್ ಮಾಡಿರುವ ಇಸ್ರೋ, ಇಂದು 101 ನೇ ಉಡಾವಣೆಯನ್ನು ಪ್ರಯತ್ನಿಸಲಾಯಿತು, ಪಿಎಸ್‌ಎಲ್‌ವಿ-ಸಿ 61 ಕಾರ್ಯಕ್ಷಮತೆ 2 ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3 ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗದ್ದು, ಕಾರ್ಯಾಚರಣೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.
PSLV-C-61 ರ ಹಾರಾಟದ ಅನುಕ್ರಮವು ವಿವಿಧ ಹಂತಗಳನ್ನು ಒಳಗೊಂಡಿದೆ, PS1 ಮತ್ತು PSOM ಅನ್ನು ನೆಲದಲ್ಲಿ ಉಡಾಯಿಸುವುದರಿಂದ ಹಿಡಿದು, ವಿವಿಧ ವಿಭಾಗಗಳನ್ನು ಬೇರ್ಪಡಿಸುವ ಹಂತವನ್ನು ಹೊಂದಿಗೆ. ಅಂತಿಮವಾಗಿ ಉಪಗ್ರಹವನ್ನು ರಾಕೆಟ್‌ನಿಂದ ಬೇರ್ಪಡಿಸುತ್ತದೆ. ಇದರಂತೆ ಮೂರನೇ ಹಂತದಲ್ಲಿ ಸಮಸ್ಯೆ ಎದುರಾಗಿದೆ. ಇದು ಘನ ರಾಕೆಟ್ ಮೋಟಾರ್ ಆಗಿದ್ದು, ಇದು ಉಡಾವಣೆಯ ಹಂತದ ನಂತರ ಮೇಲಿನ ಹಂತಕ್ಕೆ ಒತ್ತಡ ಹೆಚ್ಚಾಗುತ್ತದೆ. ಈ ಹಂತವು 240 ಕಿಲೋನ್ಯೂಟನ್‌ಗಳ ಗರಿಷ್ಠ ಒತ್ತಡವನ್ನು ಹೊಂದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

