ಬೆಂಗಳೂರು: ಬಿಸಿಲಿನ ಬೇಗೆಗೆ ಬೆಯುತ್ತಿದ್ದ ಬೆಂಗಳೂರಿಗೆ (Rain) ವರುಣದೇವ ಆಗಮಿಸಿ, ಕೂಲ್ ಸಿಟಿಯಾನ್ನಿಗಿಸಿದೆ. ನಿನ್ನ ಸಂಜೆ ಬೆಂಗಳೂರು(Bengaluru) ಸೇರಿ ರಾಜ್ಯದ ಹಲವೆಡೆ ಮಳೆ ಅಬ್ಬರ ಜೋರಾಗಿದ್ದು, ಮರಗಳು (Trees) ಮತ್ತು ವಿದ್ಯುತ್ ಕಂಬಗಳು (Electric poles) ಧರೆಗಿಳಿದಿವೆ.
ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆ, ಕಾರ್ಪೊರೇಷನ್, ಗೊರಗುಂಟೆ ಪಾಳ್ಯ, ಯಶವಂತಪುರ, ವಿಜಯನಗರ, ಮಹಾಲಕ್ಷ್ಮಿಲೇಔಟ್, ಬಸವನಗುಡಿ, ಟೌನ್‌ಹಾಲ್, ಮೆಜೆಸ್ಟಿಕ್, ಜಾಲಹಳ್ಳಿ, ನಾಗರಬಾವಿ, ಸೇರಿದಂತೆ ಹಲವೆಡೆ ಸಂಜೆ ವೇಳೆಗೆ ಧಾರಾಕಾರವಾಗಿ ಮಳೆ ಸುರಿದಿದ್ದು, ಅವಾಂತರ ಸೃಷ್ಟಿಯಾಗಿದೆ. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡುವಂತೆ ಸಂತ್ರಸ್ತೆಗೆ ಬೆದರಿಕೆ
ಬೆಂಗಳೂರು ಅಷ್ಟೇ ಅಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲೂ ಭಾರೀ ಮಳೆ ಆಗಿದೆ. ರಾಯಚೂರು, ಬಳ್ಳಾರಿ, ಮಡಿಕೇರಿ, ಹಾಸನ, ತುಮಕೂರು ಭಾಗದಲ್ಲಿ ಮಳೆ ಆಗಿದೆ. ರಾಯಚೂರಿನ ಮಾನ್ವಿಯಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದವು. ಜೋರು ಗಾಳಿಗೆ ಪಟ್ಟಣದ ಹಲವೆಡೆ ಜಾಹೀರಾತು ಫಲಕಗಳು ಮುರಿದು ಬಿದ್ದವು. ಇನ್ನು ಬಿರುಗಾಳಿ ಸಮೇತ ಸುರಿದ ಮಳೆ ಪರಿಣಾಮ ಬಳ್ಳಾರಿಯ ಕಂಪ್ಲಿಯಲ್ಲಿ ಹತ್ತಾರು ಎಕರೆಯ ಬಾಳೆ ಸಂಪೂರ್ಣ ನೆಲಕಚ್ಚಿದೆ. ಸಂಡೂರು, ಸಿರಗುಪ್ಪ, ಹಗರಿಬೊಮ್ಮನಳ್ಳಿ, ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕುಡ್ಲಿಗಿ ಭಾಗದಲ್ಲಿ ಮಳೆ ಸಿಂಚನವಾಗಿದೆ. ಇದನ್ನೂ ಓದಿ: ಮುಸ್ಲಿಮರ ಸಂಖ್ಯೆಯಲ್ಲಿ ಏರಿಕೆ , ಹಿಂದೂಗಳ ಸಂಖ್ಯೆಯಲ್ಲಿ ಕುಸಿತ

