ರಾಮನಗರ: ನಟ ದರ್ಶನ್ (Darshan) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರೋದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅನೇಕರು ಪೊಲೀಸ್ ಠಾಣೆಯ ಎದುರು ಜಮಾಯಿಸಿ ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ. ಇದೀಗ ಅವರಿಗಾಗಿ ಚನ್ನಪಟ್ಟಣದ ಮೂಲದ ಅಭಿಮಾನಿಯೊಬ್ಬರು (Fan) ಆತ್ಮಹತ್ಯೆ (Suicide) ಮಾಡಿಕೊಂಡಿರಬಹುದು ಎನ್ನುವ ಪ್ರಶ್ನೆ ಮೂಡಿದೆ.
ಭೈರೇಶ್ ಎಂಬವರು ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಳೆ ದೊಡ್ಡಿಯಲ್ಲಿ ಘಟನೆ ನಡೆದಿದೆ. ತಮ್ಮ ಹೀರೋಗೆ ಈ ಸ್ಥಿತಿ ಬರಬಾರದಿತ್ತೆಂದು ಆತ್ಮಹತ್ಯೆ ಶಂಕೆ ಮಾಡಿಕೊಂಡಿರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪೋಕ್ಸೊ ಕೇಸ್- ತನಿಖಾಧಿಕಾರಿಯಾಗಿ ಪುನೀತ್ ನೇಮಕ, ಅಧಿಕಾರಿಯಿಂದ ಬಿಎಸ್‌ವೈ ವಿಚಾರಣೆ
ದರ್ಶನ್ ಬಂಧನವಾದ ಹಿನ್ನೆಲೆ 2-3 ದಿನಗಳಿಂದ ಭೈರೇಶ್ ಅನ್ನ ನೀರು ಬಿಟ್ಟಿದ್ದರು. ದರ್ಶನ್ಗಾದ ಪರಿಸ್ಥಿತಿ ನೆನೆದು ಸಾಕಷ್ಟು ಮರುಗಿದ್ದರು. ನಿತ್ರಾಣಗೊಂಡು ಮೋರಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದೆ. ನಿಜವಾಗಲೂ ನೋವಿನಲ್ಲೇ ಆತ ಮೃತಪಟ್ಟಿದ್ದೇ ಎನ್ನುವ ಪ್ರಶ್ನೆ ಮೂಡಿದೆ. . ಇದನ್ನೂ ಓದಿ: ರಾಜ್ಯದಲ್ಲಿ ಜೂನ್ 21ರ ಬಳಿಕ ಚುರುಕುಗೊಳ್ಳಲಿದೆ ಮುಂಗಾರು
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರ ಜೊತೆಗೆ ಬರೋಬ್ಬರಿ 19 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಈಗಾಗಲೇ ದರ್ಶನ್ ಅರೆಸ್ಟ್ ಆಗಿ ವಾರ ಕಳೆದಿದೆ. ಸದ್ಯಕ್ಕೆ ಅವರಿಗೆ ಜಾಮೀನು ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ. . ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರೈಲು ಅಪಘಾತ – ಹಿಂದಿನಿಂದ ಎಕ್ಸ್‌ಪ್ರೆಸ್ ರೈಲಿಗೆ ಗುದ್ದಿದ ಗೂಡ್ಸ್ ರೈಲು

