ಮಂಡ್ಯ ; ಮಂಡ್ಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಾಗೇಶ್ ಅವರು ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಅವರು ಆಯ್ಕೆಯಾದರು
ಇವರಿಬ್ಬರಿಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಅಭಿನಂದನೆಗಳು ತಿಳಿಸಿದರು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು ಮಂಡ್ಯದ ನಗರಸಭೆ ಗದ್ದುಗೆಯನ್ನು ಜೆಡಿಎಸ್-ಬಿಜೆಪಿ ಹಿಡಿದಿದೆ.ಒಟ್ಟು 37 ಮತದಾರರಲ್ಲಿ 19 ಮಂದಿ ನಮಗೆ ಮತ ಹಾಕಿದ್ದಾರೆ ಎಂದರು.
ಮಂಡ್ಯ ನಗರಸಭೆ ಚುನಾವಣೆ ಯನ್ನ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ರು.ನಾವು ಆ ಸವಾಲು ಸ್ವೀಕಾರ ಮಾಡಿ ಗೆಲುವು ಸಾಧಿಸಿದೆವು..
ನಮ್ಮ ಸದಸ್ಯರು ಯಾವುದೇ ಆಮಿಷಕ್ಕೆ ಒಳಗಾಗಲಿಲ್ಲ.ರಾಜಕೀಯ ಅಂದರೆ ಆಮಿಷ ಎಲ್ಲಾ ಸಹಜ. ಅಂತಿಮವಾಗಿ ನಂಬರ್ ಎನ್ನೋದು ಮುಖ್ಯ. ನಾವು ಆ ನಂಬರ್ ಅನ್ನು ಮುಟ್ಟಿದ್ದೇವೆ.ಮುಂದಿನ ದಿನಗಳಲ್ಲಿ ಇತರೆ ಚುನಾವಣೆಗಳಲ್ಲಿ ಎನ್‌ಡಿಎ ಗೆಲ್ಲುತ್ತೆ ಎಂದು ಭರವಸೆ ನೀಡಿದರು..