ನಿರೂಪಕಿ ಅನುಶ್ರೀ ಕಲ್ಯಾಣ ನೆರವೇರಿದೆ. ‘ಅನುಶ್ರೀ ಮದುವೆ ಯಾವಾಗ?’ ಅಂತ ಫ್ಯಾನ್ಸ್ ಪದೇ ಪದೇ ಕೇಳುತ್ತಲೇ ಇದ್ದರು. ಆ ಘಳಿಗೆ ಬಂದೇಬಿಟ್ಟಿದೆ. ಇಂದು (ಆಗಸ್ಟ್ 28) ಅನುಶ್ರೀ ವಿವಾಹ ಮಹೋತ್ಸವ ಸಖತ್ ಅದ್ಧೂರಿಯಾಗಿ ಜರುಗಿದೆ. ರೋಷನ್ ಎಂಬುವರನ್ನ ನಟಿ ಕಮ್ ಆಂಕರ್ ಅನುಶ್ರೀ ಮದುವೆಯಾಗಿದ್ದಾರೆ.
ಇವತ್ತು (ಆಗಸ್ಟ್ 28) ಗುರುವಾರ ಬೆಳಗ್ಗೆ 10:56 ಕ್ಕೆ ಇದ್ದ ಶುಭ ಲಗ್ನದಲ್ಲಿ ಅನುಶ್ರೀ – ರೋಷನ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದ ತಿಟ್ಟಹಳ್ಳಿ ರೋಡ್ ಬಳಿಯ ‘ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್’ ಎಂಬ ಖಾಸಗಿ ರೆಸಾರ್ಟ್‌ನಲ್ಲಿ ಅನುಶ್ರೀ – ರೋಷನ್ ಕಲ್ಯಾಣ ಗ್ರ್ಯಾಂಡ್ ಆಗಿ ನಡೆದಿದೆ.
ಇಂದು ಬೆಳಗ್ಗೆ 10:56ಕ್ಕೆ ಶುಭ ಮುಹೂರ್ತದಲ್ಲಿ ಅನುಶ್ರೀ ಕೊರಳಿಗೆ ರೋಷನ್ ಮಾಂಗಲ್ಯಧಾರಣೆ ಮಾಡಿದರು. ಈ ವೇಳೆ ತಾಳಿಯನ್ನ ಬಿಗಿ ಹಿಡಿದು ಅನುಶ್ರೀ ಭಾವುಕರಾದರು. ಎಮೋಷನಲ್ ಆದ ಅನುಶ್ರೀ ಕಣ್ಣೀರಿಟ್ಟರು. ಪತ್ನಿಯ ಕಣ್ಣಾಲಿಗಳು ಒದ್ದೆಯಾಗಿದ್ದನ್ನ ಕಂಡ ರೋಷನ್.. ಅನುಶ್ರೀ ಅವರನ್ನ ಸಮಾಧಾನ ಪಡಿಸಿ ಕೆನ್ನೆಗೆ ಸಿಹಿ ಮುತ್ತು ನೀಡಿದರು.

ಇಷ್ಟು ದಿನ ಅನುಶ್ರೀ ಹೋದಲ್ಲಿ ಬಂದಲ್ಲಿ ಅವರ ಅಭಿಮಾನಿಗಳು, ಮಾಧ್ಯಮದವರು ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಲೇ ಇದ್ದರು. ಸೂಕ್ತ ಹುಡುಗ ಸಿಕ್ಕಿದಾಗ ಎಂದು ನಗುತ್ತಲೇ ಉತ್ತರಿಸುತ್ತಿದ್ದ ಅನುಶ್ರೀ ಕೊನೆಗೂ ರೋಷನ್ ಎಂಬುವವರ ಜೊತೆ ವಿವಾಹವಾಗಿದ್ದಾರೆ.
ನಿರೂಪಕಿ ಅನುಶ್ರೀ ಹಾಗೂ ರೋಷನ್ ಅದ್ಧೂರಿ ಮದುವೆಗೆ ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ, ಶರಣ್, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ.

