ಕಾಂತಾರ ಚಾಪ್ಟರ್ ಒನ್ ಚಿತ್ರ ಎರಡೇ ಎರಡು ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಮೊದಲ ದಿನ ಅಕ್ಟೋರ್- 2 ರಂದು ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಥಿಯೇಟರ್ ಸೇರಿ ಇಡೀ ಇಂಡಿಯಾದಲ್ಲಿ 7000 ಸ್ಕ್ರೀನ್ ಅಲ್ಲಿ ಈ ಚಿತ್ರ ಪ್ರದರ್ಶನ ಕಂಡಿದೆ.
ಸಿನಿಮಾ ಬಿಡುಗಡೆ ಆದ ಮೊದಲ ದಿನವೇ ಭಾರತದಲ್ಲಿ 45 ಕೋಟಿ ರೂ., ವಿದೇಶಗಳಲ್ಲಿ 10 ಕೋಟಿ ರೂ. ಗಳಿಸಿದ್ದು, ಇದೀಗ 100 ಕೋಟಿ ಕ್ಲಬ್ ಗೆ ಸೇರಿದೆ. .ಈ ಚಿತ್ರ ಮೊದಲ ದಿನ 62 ಕೋಟಿ ರೂ ಕಲೆಕ್ಷನ್ ಮಾಡಿತ್ತು, ಈ ಸಿನಿಮಾ ಶುಕ್ರವಾರ 43.65 ಕೋಟಿ ರೂ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಒಟ್ಟು 6500 ಸ್ಕ್ರೀನ್ ಗಳಲ್ಲಿ ಸುಮಾರು 12, 511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿವೆ.
ದೇಶಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ, ದೇಶಾದ್ಯಂತ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಮೆರಿಕ ಸೇರಿದಂತೆ 30 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

