ಹೆಸರಾಂತ ನಟ ಹಾಗೂ ನಿರ್ಮಾಪಕರಾದ ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದ ಸುದೀಪ್ (Sudeep) ಅವರು ಇಂದು ದ್ವಾರಕೀಶ್ ಅವರ ಅಂತಿಮ ನಮನ ಪಡೆದಿದ್ದಾರೆ.
ನಟ ಸುದೀಪ್ ಅವರು ಇಂದು ತಮ್ಮ ಶೂಟಿಂಗ್ (Shooting) ಬ್ರೇಕ್ ಮಾಡಿ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದರೆ. ಮ್ಯಾಕ್ಸ್ ಸಿನಿಮಾದ ಶೂಟಿಂಗ್ಗಾಗಿ ಅವರು ಚೆನ್ನೈನಲ್ಲಿದರು. ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ದ್ವಾರಕೀಶ್ ಕುಟುಂಬದ ದುಖದಲಲಿ ಭಾಗಿಯಾಗಿದ್ದಾರೆ. ದ್ವಾರಕೀಶ್ ಬ್ಯಾನರ್ನಲ್ಲಿ ಸುದೀಪ್ ಸಿನಿಮಾ ಮಾಡಿದ್ದರು. ವಿಷ್ಣುವರ್ಧನ್ ಹೆಸರಿನ ಸಿನಿಮಾ ದ್ವಾರಕೀಶ್ ಆರ್ಥಿಕ ಸ್ಥಿತಿಯನ್ನು ಚೇತರಿಕೆ ಕಾಣುವಂತೆ ಮಾಡಿತ್ತು.
ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7 ಗಂಡೆಗೆ ಮನೆಯಲ್ಲಿ ಕಾರ್ಯಗಳು ನಡೆದಿವೆ. ಮನೆಯಿಂದ ಕಲಾಕ್ಷೇತ್ರಕ್ಕೆ ಪಾರ್ಥೀವ ಶರೀರವನ್ನು ತರಲಾಗಿದ್ದು, ಅಭಿಮಾನಿಗಳು ಮತ್ತು ಕಲಾವಿದರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ