ಯಾದಗಿರಿ: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯೊಬ್ಬರನ್ನು (Forest Officer) ಬರ್ಬರವಾಗಿ ಕೊಲೆಗೈದಿರುವ ಘಟನೆ ಯಾದಗಿರಿಯಲ್ಲಿ (Yadagiri) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹೇಶ್ ಕನಕಟ್ಟಿ ಬರ್ಬರ ಹತ್ಯೆಯಾದ ಶಹಾಪೂರ ಅರಣ್ಯಾಧಿಕಾರಿ. ಇದೇ ತಿಂಗಳು 5 ರಂದು ಯಾದಗಿರಿ ಜಿಲ್ಲೆ ಶಹಾಪೂರ (Shahapura) ಪಟ್ಟಣದ ಮೋಟಗಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ (Bar and Restaurant) ಕೊಲೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಕುಡಿದ ಅಮಲಿನಲ್ಲಿ ಹಂತಕರು ಕ್ಷುಲ್ಲಕ ಕಾರಣಕ್ಕೆ ಕೊಲೆಗೈದು ಈಗ ಪೊಲೀಸರ ಅತಿಥಿಯಾಗಿದ್ದಾರೆ. ರಾಜು, ರೇಖು ನಾಯ್ಕ್, ತಾರಾ ಸಿಂಗ್, ನರಸಿಂಗ್ ಹಾಗೂ ಪ್ರಕಾಶ ಬಂಧಿತ ಕೊಲೆ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ನಿಧನ
ಇದೇ ತಿಂಗಳ ಜೂನ್ 5ರಂದು ಎಂದಿನಂತೆ ಮೋಟಗಿ ರೆಸ್ಟೋರೆಂಟ್‌ಗೆ ಮಹೇಶ್ ಕನಕಟ್ಟಿ ಊಟಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಕುಡಿದು ಚೀರಾಡುತ್ತಿದ್ದರು. ಅವರನ್ನ ತಡೆಯಲು ಹೋದಾಗ, ಮಹೇಶ್ ಹಾಗೂ ದುಷ್ಕರ್ಮಿಗಳ ನಡುವೆ ವಾಗ್ದಾದ ನಡೆದಿದೆ. ಕೊನೆಗೆ ಕುಡಿದ ಮತ್ತಿನಲ್ಲಿದ್ದ ಹಂತಕರು ಬಡಿಗೆಯಿಂದ ಹೊಡೆದು, ಕಾಲಿನಿಂದ ಜಾಡಿಸಿ ಒದ್ದು ಅಧಿಕಾರಿಯನ್ನ ಕೊಂದು ಪರಾರಿಯಾಗಿದ್ದರು.ಇದನ್ನೂ ಓದಿ: ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಕೇಳ್ಬೇಡಿ – ಹೆಚ್‌ಡಿಕೆ ಕಿಡಿ
ಮರುದಿನ ರೆಸ್ಟೋರೆಂಟ್ ಬಳಿ ಬಿಸಾಡಿದ್ದ ಮಹೇಶ್ ಅವರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ನಡುವೆ ಮೃತ ಮಹೇಶ್ ಪತ್ನಿ ಕೊಲೆ ಆರೋಪ ಮಾಡಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ರೆಸ್ಟೋರೆಂಟ್‌ನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ. ಸದ್ಯ ಐವರು ಆರೋಪಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು, ಹಂತಕರ ವಿರುದ್ಧ ಶಹಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಲೇಖಲಿ ಕಮಲಾ ಹಂಪನ ಹೃದಯಾಘಾತದಿಂದ ನಿಧನ

