ಕೋಲಾರ : ಮುಳಬಾಗಿಲು ತಾಲ್ಲೂಕು ಬಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿಜಿಲಾಪುರ ಗ್ರಾಮದಲ್ಲಿ ವಾಸವಿರುವ 35 ದಲಿತ ಕುಟುಂಬಗಳಿಗೆ ಇಂದಿಗೂ ಶೌಚಾಲಯವಿಲ್ಲದೆ ಪರದಾಡುವಂತ ಪರಿಸ್ಥಿತಿ ಇಂದಿಗೂ ಜೀವಂತವಾಗಿದೆ,
ವಿಜಲಾಪುರ ಗ್ರಾಮದ 35ಕ್ಕೂ ಹೆಚ್ಚು ಕುಟುಂಬಗಳು ಬಂಡೆಗಳ ಮೇಲೆ ಮನೆಗಳನ್ನು ಕಟ್ಟಿಕೊಂಡು ವಾಸವಿರುವುದರಿಂದ ಈ ಜಾಗದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಗುಣಿ ಅಗಿಯಲೂ ಹಾಗೂ ಪಿಟ್ ನಿರ್ಮಾಣ ಮಾಡಲು ಬಂಡೆಗಳ ಮೇಲೆ ಆಗದಿರುವುದರಿಂದ ಇಂದಿಗೂ ಮಹಿಳೆಯರು ಮಕ್ಕಳು ವಯಸ್ಸಾದವರು ಬಯಲು ವಿಸರ್ಜನೆಗೆ ಹೋಗುವಂತ ಪರಿಸ್ಥಿತಿ ಉಂಟಾಗಿ ತುಂಬಾ ತೊಂದರೆ ಅನುಭವುಸುತ್ತಿದ್ದಾರೆ,
ಅದ್ದರಿಂದ ನಮ್ಮ ಸಂಪೂರ್ಣ ವಾಹಿನಿ ಚಾನೆಲ್ ಆ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಾಗ 35 ಕುಟುಂಬಗಳು ಸಾರ್ವಜನಿಕರು ನಮಗೆ ಸರ್ಕಾರದಿಂದ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ಶೌಚಾಲಯಗಳನ್ನು ನಿರ್ಮಾಣ ಮಾಡಿ ನಮಗೆ ಬಯಲು ಮುಕ್ತ ಪ್ರದೇಶವಾಗಿ ಮಾಡಿ ಶೌಚಾಲಯ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಬೇಕೆಂದು ನಮ್ಮ ವಾಹಿನಿ ಮೂಲಕ ಮನವಿ ಮಾಡಿದರು.
ಈ ವಿಚಾರವಾಗಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಹಾಗೂ ನಮ್ಮ ತಾಲೂಕಿನ ಶಾಸಕರು ಮತ್ತು ತಾಲೂಕು ಪಂಚಾಯತಿಯವರು ಈ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಜನರ ಸಮಸ್ಯೆಯನ್ನು ಮಾಹಿತಿ ಪಡೆದು ಆದಷ್ಟು ಬೇಗ ವಿಜಲಪುರ ಗ್ರಾಮದ 35 ದಲಿತ ಕುಟುಂಬಗಳಿಗೆ ಶೌಚಾಲಯವನ್ನು ನಿರ್ಮಾಣ ಮಾಡಿಕೊಡಬೇಕೆಂದು
ನಮ್ಮ ಸಂಪೂರ್ಣ ವಾಹಿನಿ ಚಾನೆಲ್ ನ ಆಶಯವಾಗಿದೆ.
ವರದಿ.. ಅರುಣ್ ಕುಮಾರ್

