ಕೋಲ್ಕತ: ಆರ್ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ತಮ್ಮ 42 ದಿನಗಳ ಹೋರಾಟವನ್ನು ಕಡೆಗೂ ಹಿಂಪಡೆದು ಶನಿವಾರದಿಂದ ಕೆಲಸಕ್ಕೆ ಮರಳುತ್ತೇವೆ ಎಂದು ಹೇಳಿದ್ದಾರೆ.
ಹಲವು ಬಾರಿ ಪ್ರತಿಭಟನೆ ಕೈಬಿಟ್ಟು, ಆಸ್ಪತ್ರೆಗಳಲ್ಲಿ ನಿಮ್ಮ ಕೆಲಸಗಳನ್ನು ಮುಂದುವರೆಸಿ, ಸಾವಿರಾರೂ ರೋಗಿಗಳ ಪ್ರಾಣ ಉಳಿಸಿ ಎಂದು ಬೇಡಿಕೊಂಡಿದ್ದ ಸಿಎಂ ಮಮತಾ ಕಡೆಯ ಬಾರಿಗೆ ಹಲವು ಭರವಸೆಗಳನ್ನು ಕೊಡುವ ಮುಖೇನ ನಡೆಸಿದ ಪ್ರಯತ್ನ ಯಶಸ್ವಿಯಾಗಿದ್ದು, ಈಗ ಹೋರಾಟವನ್ನು ಕೈಬಿಡಲಾಗಿದೆ.
ಕೊಲ್ಕತ್ತಾದ ಕಿರಿಯ ವೈದ್ಯರು ಈ ಶನಿವಾರದಿಂದ ತುರ್ತು ವೈದ್ಯಕೀಯ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರವು ಹಲವಾರು ದಿನಗಳ ಪ್ರತಿಭಟನೆ ಮತ್ತು ಸೇವೆಗಳಲ್ಲಿ ಅಡ್ಡಿಪಡಿಸಿದ ನಂತರ ಸರ್ಕಾರಕ್ಕೆ ಕೊಂಚ ರಿಲೀಫ್ ಉಂಟುಮಾಡಿದೆ. ವೈದ್ಯರ ಮುಷ್ಕರದಿಂದ ಕೊಲ್ಕತ್ತಾದ ಜನರು ವೈದ್ಯರ ಚಿಕಿತ್ಸೆ ಸಿಗದೆ ಸಾಕಷ್ಟು ತುಂದರೆ ಅನುಭವಿಸಿದ್ದರು. ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ಈ ಮಧ್ಯೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಒಂದು ಕಂಡಿಷನ್ ಹಾಕಿ ಪ್ರತಿಭಟನೆ ಕೊನೆಗೊಳಿಸಿರುವ ವೈದ್ಯರು, ಅತ್ಯಾಚಾರ-ಹತ್ಯೆ ಕೇಸ್ ಬಗ್ಗೆ ಆಡಳಿತ ಹೇಗೆ ನಡೆಯುತ್ತದೆ ಎಂಬುದನ್ನು ನಾವೆಲ್ಲಾ (ಡಾಕ್ಟರ್ಸ್) ಬಹಳ ಸೂಕ್ಷ್ಮವಾಗಿ ಗಮನಿಸುತ್ತೇವೆ. ನೀವು ಕೊಟ್ಟಿರುವ ಭರವಸೆ ಹೇಗೆ ಕಾರ್ಯ ರೂಪಕ್ಕೆ ತರುತ್ತೀರಿ ಎಂಬುದನ್ನು ಒಂದು ವಾರದವರೆಗೂ ಕಾದು ನೋಡ್ತೀವಿ. ಏನಾದರೂ ಗೊಂದಲ ಅನಿಸಿದರೆ ಅಥವಾ ನೀವು ಹೇಳಿದ್ದು ಯಾವುದು ಈಡೇರದೆ ಹೋದರೆ ಖಂಡಿತ ಮತ್ತೇ ಬೀದಿಗಿಳಿದು ಪ್ರತಿಭಟನೆ ಕೈಗೊಳ್ಳುತ್ತೀವಿ. ಅದು ಖಚಿತ ಎಂಬ ಎಚ್ಚರಿಕೆಯ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.
ಘಟನೆಯ ತನಿಖೆ ಬಿರುಸಿನಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ, ತನಿಖೆಗೆ ಒಳಪಡಿಸಿದರು. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸುವ ಮೂಲಕ ಮಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದೇ ಆದರೂ ನ್ಯಾಯಕ್ಕಾಗಿ ಪ್ರತಿಭಟನೆ ಕೈಗೊಂಡಿದ್ದ ಡಾಕ್ಟರ್ಗಳು ಎಂದಿನಂತೆ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.