ಮಂಗಳೂರು : : ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್ ಲಿಂಗೇಗೌಡ ಗುಜರಾತಿನ ಭರೂಚ್ ನಗರದಲ್ಲಿ ನಡೆದ ಲಾರಿ ಅಪಘಾತದಿಂದ ಜೀವ ಬಿಟ್ಟಿದ್ದಾರೆ.
ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್ ಲಿಂಗೇಗೌಡ ಜೊತೆ ಮಂಗಳೂರು ಮೂಲದ ಕುಂಜಿ ಮೂಸಾ ಎನ್ನುವರು ಅಪಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು.
ತಪ್ಪಿತಸ್ಥರಿಗೆ ಉಗ್ರಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ಮಂಗಳೂರಿನಿಂದ ದೆಹಲಿಗೆ 5 ಜನರ ತಂಡ ಪಾದಯಾತ್ರೆ ಮಾಡುತ್ತಿದ್ದರು. ಡಿ.11ಕ್ಕೆ 55ನೇ ದಿನದ ಪಾದಯಾತ್ರೆ ಗುಜರಾತಿನ ಭರೂಚ್ ನಗರ ತಲುಪಿತ್ತು.
ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಕಠಿಣ ಕಾನೂನು ರೂಪಿಸಲು ಮನವಿ ಮಾಡುವುದು ತನ್ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ನಾಂದಿಹಾಡಬೇಕು ಎಂಬುವುದು ಈ ತಂಡದ ಪಾದಯಾತ್ರೆಯ ಉದ್ದೇಶವಾಗಿತ್ತು.