ಕುಣಿಗಲ್ : ಪುರಸಭೆ ಅಧ್ಯಕ್ಷೆ” ಎಸ್ ಮಂಜುಳಾ” ಅವರು ಗುರುವಾರ ಮಧ್ಯಾಹ್ನ ಬಜೆಟ್ ಮಂಡನೆ 47.83.588₹ ಲಕ್ಷ ಉಳಿತಾಯ.

2025 -26 ನೇ ಸಾಲಿನ ಆಯವ್ಯಯದ ಬಗ್ಗೆ ಕುರಿತು ಮಾತನಾಡಿದ ನೂತನ ಪುರಸಭೆ ಅಧ್ಯಕ್ಷೆ ಎಸ್ ಮಂಜುಳಾ ಅವರು ಸ್ವಯಂಘೋಷಿತ ಆಸ್ತಿ ತೆರಿಗೆ 378 ಲಕ್ಷ, ನೀರು ಸರಬರಾಜು ಸಂಪರ್ಕ 89 85 ಲಕ್ಷ, ಪುರಸಭಾ ವ್ಯಾಪ್ತಿಯ ಖಾಸಗಿ ಹಣಕಾಸು ಸಂಸ್ಥೆ ಮತ್ತು ಸಂಚಾರಿ ದೂರವಾಣಿ ಟವರ್ 30 ಲಕ್ಷ, ಅಂಗಡಿ ಮಳಿಗೆ 40 ಲಕ್ಷ, ಪರಿವೀಕ್ಷಣ ಶುಲ್ಕ ಉದ್ದಿಮೆ ಪರಾವನಿಗೆ ಖಾತಾನಕಲು 197 ಲಕ್ಷ, ವಿದ್ಯುತ್ ವೆಚ್ಚ ಕುಡಿಯುವ ನೀರು ಅಮೃತ್ ಕೇಂದ್ರ ಪಾರ್ಕ್ ಜಲಮೂಲಗಳ ಪುನಶ್ಚೇತನ 800 ಲಕ್ಷ, ಕೊಳಚೆ ನೀರು ಸಂಸ್ಕರಣ ಘಟಕಕ್ಕೆ 350 ಲಕ್ಷ, ಬಸ್ ನಿಲ್ದಾಣ ವಾಣಿಜ್ಯ ಸಂಕೀರ್ಣ 10 ಲಕ್ಷ, ಘನ ತ್ಯಾಜ್ಯ ವಿಲೇವಾರಿ ಘಟಕ 178 ಲಕ್ಷ, 15ನೇ ಹಣಕಾಸು ಯೋಜನೆ 250 ಲಕ್ಷ, ಪೌರ ಕಾರ್ಮಿಕರ ಗೃಹ ಭಾಗ್ಯ1 ಲಕ್ಷ, ಪುರಸಭೆ ಸಿಬ್ಬಂದಿ ವೇತನ 390 ಲಕ್ಷ, ಬೀದಿ ದೀಪ ಮತ್ತು ನೀರು ಸರಬರಾಜು 300 ಲಕ್ಷ , ಗಣ ತ್ಯಾಜ್ಯ ವಿಲೇವಾರಿ ಘಟಕ 178 ಲಕ್ಷ, ಪತ್ರಕರ್ತರ ಆರೋಗ್ಯ ವಿಮೆ 3 ಲಕ್ಷ, ದಸರಾ ಹಬ್ಬದ ಕಾರ್ಯಕ್ರಮ ವೆಚ್ಚ 10 ಲಕ್ಷ, ಮ್ಯೂಸಿಕಲ್ ಲೈಟ್ಸ್ ಹಾಗೂ ಗುಂಬಜ್ ನವೀಕರಣ 10 ಲಕ್ಷ, ಈಜುಕೊಳ ರೂ. 10 ಲಕ್ಷ, ಅಂಬೇಡ್ಕರ್ ಭವನ ವಿನ್ಯಾಸಕ್ಕೆ 5 ಲಕ್ಷ, ಬೀದಿ ಬದಿ ವ್ಯಾಪಾರಿಗಳ ಸುರಕ್ಷಿತ ಸಾಮಗ್ರಿಗಳ ಖರೀದಿಗೆ 2 ಲಕ್ಷ, ಆಧುನಿಕರಣ 10 ಲಕ್ಷ , ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 4 ಲಕ್ಷ, ಪೌರಕಾರ್ಮಿಕರಿಗೆ ರೋಗನಿರೋಧಕ ತಡೆಗಟ್ಟಲು ಎಚ್ ಬಿ ಬಿ ವ್ಯಾಕ್ಸಿನ್ 3ಲಕ್ಷ. ಪೌರಕಾರ್ಮಿಕರ ವಿದೇಶ ಪ್ರವಾಸ ಹಾಗೂ ಆರೋಗ್ಯ ವಿಮೆ 7 ಲಕ್ಷ, ಗಿಡ ನೆಡುವ ಕಾರ್ಯಕ್ರಮಕ್ಕೆ 10 ಲಕ್ಷ, ಮಳೆ ನೀರು ಇಂಗು ಗುಂಡಿ ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ 5 ಲಕ್ಷ, ಸ್ವಾವಲಂಬಿ ವಿದ್ಯುತ್ ಕಾಮಗಾರಿ 20 ಲಕ್ಷ, ಸಂವಿಧಾನ 10 ಲಕ್ಷ ಎಂದು ತಿಳಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳು ಒಟ್ಟಾರೆ 41.95.97.000₹ ಕೋಟಿ ಎಂದು ನಿರೀಕ್ಷಿಸಲಾಗಿದೆ ಎಂದರು,,
ಇದೇ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ರಾದ ರಂಗಸ್ವಾಮಿ ರವರು ಮಾತನಾಡಿ ಸಿಸಿಟಿವಿ ಗಳಿಗೆ 8 ಲಕ್ಷ ನಿಗದಿ ಮಾಡಬೇಕು ,ಮಹಿಳಾ ಸಂಘಗಳಿಗೆ 1 ಲಕ್ಷ ರೂ,ಲೋನ್ ಮೀಸಲಿಡಬೇಕು, ಜಾನುವಾರಗಳ ಅಂತ್ಯ ಸಂಸ್ಕಾರಕ್ಕೆ 5000 ಮೀಸಲಿಡಬೇಕು, ಶವ ಸಂಸ್ಕಾರಕ್ಕೆ ಬಡವರಿಗೆ 5000 ಪ್ರೋತ್ಸಾಹ ಧನ ಮೀಸಲಿಡಬೇಕು, ಅಂಬೇಡ್ಕರ್ ದೀಕ್ಷ ಭೂಮಿ ಯಾತ್ರೆಗೆ 2 ಲಕ್ಷವನ್ನು ಮೀಸಲಿಡಬೇಕು, ಬಡಜನರ ವೈದ್ಯಕೀಯ ಧನ ಸಹಾಯ ಧನಕ್ಕೆ 2 ಲಕ್ಷ ಮೀಸಲಿಡಬೇಕು, ಅಂಗನವಾಡಿ ಮಕ್ಕಳಿಗೆ ಎರಡು ಲಕ್ಷ ಮೀಸಲಿಡಬೇಕು ಪೀಠೋಪಕರಣಗಳು ಹಾಗೂ ಪ್ರತಿ ಅಂಗನವಾಡಿಗೊಂದು ಟಿವಿ ಇಡಬೇಕು, ಇದನ್ನು ಅಂಶಗಳಲ್ಲಿ ತೆಗೆದುಕೊಳ್ಳಬೇಕು, ಬಡ ಜನರ ಯೋಜನೆ ಅಡಿಯಲ್ಲಿ RT ಕೇಸ್ 5 ಲಕ್ಷ, ಮಿಸಲಿಡಬೇಕು, ನಂತರ ನಲ್ಲಿ ನೀರಿನ ಡಿಮ್ಯಾಂಡ್ ರಿಜಿಸ್ಟರ್ ಕೂಡ ಇಲ್ಲ ಎಂದು ಕಿಡಿ ಕಾರಿದರು, ಪಟ್ಟಣದಲ್ಲಿ 128 ಬೋರುಗಳಿದ್ದು 100 ಕೋಟಿ ನೀರಿನ ಖರ್ಚಾಗುತ್ತದೆ ಆದ್ದರಿಂದ ಅಧಿಕಾರಿಗಳ ಜೊತೆಯಲ್ಲಿ ಕೈಜೋಡಿಸಿ ಸದಾ ಕರ್ತವ್ಯದಲ್ಲಿ ತೊಡಗಬೇಕು ಪಟ್ಟಣದಲ್ಲಿ 18 ಅಂಗನವಾಡಿ ಕೇಂದ್ರಗಳಿದ್ದು ಪ್ರತಿ ಅಂಗನವಾಡಿಗೆ ಎರಡು ಲಕ್ಷ ಮೀಸಲಿಡುವಂತೆ ಅಧ್ಯಕ್ಷರು ಉಪಾಧ್ಯಕ್ಷರಿಗೆ ತಿಳಿಸಿದರು,,
ಪುರಸಭಾ ಸದಸ್ಯರಾದ ಕೃಷ್ಣರವರು ಮಾತನಾಡಿ ಬಾಲಕಿಯರ ಪ್ರೌಢಶಾಲೆ ಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, 5 ಲಕ್ಷದಲ್ಲಿ ದಲ್ಲಿ ಇರುವ ಅಮೃತ್ ಯೋಜನೆ ಅಳವಡಿಸಿಕೊಂಡು, ಪಟ್ಟಣದ ಜನತೆಗೆ ಕುಡಿಯುವ ನೀರನ್ನು ವ್ಯವಸ್ಥಿತವಾಗಿ ತಲುಪಿಸುವ ಕಾರ್ಯ ಮಾಡಬೇಕು, ಪಟ್ಟಣದಲ್ಲಿ ನಾಯಿಗಳ ಸಮಸ್ಯೆ ತುಂಬಾ ಇದ್ದು ದಯವಿಟ್ಟು ಇದರ ಬಗ್ಗೆ ನೀವುಗಳು ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು, ಇಲ್ಲದಿದ್ದರೆ ನೇರ ಹೊಣೆ ನೀವೇ ಎಂದು ಮಾತನಾಡಿದರು, ಮದ್ದೂರು ರೋಡ್ ನಲ್ಲಿ ರಾಘವೇಂದ್ರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಜಾಗ ಇದ್ದು ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯನ್ನು ಮಾಡಬೇಕು ಎಂದು ತಿಳಿಸಿದರು,,
ಅಧಿಕಾರಿಗಳು ಸಾರ್ವಜನಿಕರಲ್ಲಿ ಸೌಜನ್ಯತೆಯಿಂದ ನಡೆದುಕೊಳ್ಳಬೇಕು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು, ಪಟ್ಟಣದ ಬಸ್ ಸ್ಟ್ಯಾಂಡ್ ಅನ್ನು ಅಭಿವೃದ್ಧಿ ಮಾಡಬೇಕು ಈ ಹಿಂದೆ ನಮ್ಮ ಶಾಸಕರು ಹೋರಾಟ ಮಾಡಿ ಕಷ್ಟಪಟ್ಟಿದ್ದಾರೆ ,ಆದ್ದರಿಂದ ಯಾವುದೇ ರೀತಿ ದುರುಪಯೋಗ ಮಾಡಿಕೊಳ್ಳದಂತೆ ಗಮನಹರಿಸಬೇಕು, ಪಾರ್ಕ್ ಮತ್ತು ವಾಟರ್ ಸಪ್ಲೈ ಗಳನ್ನು ಫಾಲೋ ಮಾಡಿ ನಂತರ ಅಪ್ ಮಾಡಿ ಎಂದು ತಿಳಿಸಿದರು,,
ಕಂದಾಯ ಕಟ್ಟಿದರು ಸಹ ಮನೆ ಮುಂದೆ ಹೋಗಲು ರಸ್ತೆ ಇಲ್ಲ ಚರಂಡಿಯ ಕೆಲಸ ನೆರವೇರಿಲ್ಲ, ಪಟ್ಟಣದಲ್ಲಿ 23 ವಾರ್ಡ್ ಗಳಿವೆ ಸಂಬಂಧಪಟ್ಟ ಸದಸ್ಯರುಗಳಿಗೆ ತಿಳಿಸದೆ ಬಜೆಟ್ ಮಂಡನೆಯನ್ನು ಏಕಏಕಿ ಮೂರು ದಿವಸದಲ್ಲಿ ನಿರ್ಧಾರ ಕೈಗೊಂಡಿರುವುದು ಸೂಕ್ತವಲ್ಲ, ಮುದ್ದು ಪುರಸಭಾ ಸದಸ್ಯರಾದ ವಾಸಣ್ಣ ಮಾತನಾಡಿದರು, ಲಾಯರ್ ಇಲ್ಲ, ಡಾಕ್ಟರ್ ಇಲ್ಲ, ಒಬ್ಬ ಸಾಹಿತಿ ಇಲ್ಲ, ಹತ್ತು ವರ್ಷಗಳಿಂದ ಸವಲತ್ತುಗಳು ಇಲ್ಲ ಪರಿಪೂರ್ಣ ಕೂಡ ಆಗಿಲ್ಲ, ಇದು ಜನ ವಿರೋಧಿ ಬಜೆಟ್ ಇದು ಯಾವುದೋ ಒತ್ತಡಕ್ಕೆ ಮಣಿದು ನೀವು ದೃಢ ನಿರ್ಧಾರ ತೆಗೆದುಕೊಂಡಿದ್ದೀರಾ ಎಂದು ಕಿಡಿಕಾರಿದರು,,
ಬಜೆಟ್ ಮಂಡನೆಯ ಕುರಿತು ಮಾತನಾಡಿದ ನೂತನ ಪುರಸಭೆ ಅಧ್ಯಕ್ಷೆ ಪಟ್ಟಣದ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಬಹುಮುಖ್ಯವಾಗಿದೆ, ನಿಮ್ಮೆಲ್ಲರ ಆಶೀರ್ವಾದದಿಂದ ಪಟ್ಟಣದ ಜನತೆಯ ಸೇವೆ ಮಾಡಲು ನನಗೆ ಸದಾ ಅವಕಾಶ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಪುರಸಭೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಆದಷ್ಟು ಬೇಗ ಕಡಿವಾಣ ಹಾಕುವ ಕೆಲಸಗಳನ್ನು ಮಾಡುತ್ತೇವೆ, ಪುರಸಭಾ ಸದಸ್ಯರು ತಿಳಿಸಿರುವ ಕೆಲಸಗಳನ್ನು ಅತಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುತ್ತೇನೆ ಎಂದು ಮಾತನಾಡಿದರು,,
ಇದೇ ಸಂದರ್ಭದಲ್ಲಿ ನೂತನ ಪುರಸಭೆ ಅಧ್ಯಕ್ಷೆ ಎಸ್ ಮಂಜುಳಾ, ಉಪಾಧ್ಯಕ್ಷರಾದ ಮಲ್ಲಿಪಾಳ್ಯ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಮಂಜುಳಾ ,ಜಿ ಪುರಸಭಾ ಸದಸ್ಯರುಗಳಾದ ರಂಗಸ್ವಾಮಿ, ನಾಗೇಂದ್ರ, ಅರುಣ್ ಕುಮಾರ್, ದೇವರಾಜು, ಕೃಷ್ಣ, ಉದಯ್ ಕುಮಾರ್, ಆನಂದ್ (ಕಾಂಬ್ಲೆ) ವಾಸಣ್ಣ, ಅಸ್ಮ ಜಬಿ, ರೂಪಿಣಿ, ಜಯಲಕ್ಷ್ಮಿ, ಗಂಗಲಕ್ಷ್ಮಿ, ಸಬೀನಾ, ಅಂಜುಮ್ ಶಬಾನ, ಹಾಗೂ ಪುರಸಭೆ ಸಿಬ್ಬಂದಿ ವರ್ಗದವರುಸೇರಿದಂತೆ ಸಭೆಯಲ್ಲಿ ಹಾಜರಿದ್ದರು,,,
ವರದಿ ನರಸಿಂಹರಾಜು